VIDEO: ಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ‘ಪುಷ್ಪ’ ಸ್ಟೈಲ್‌ನಿಂದ ಗಮನಸೆಳೆದ ರವೀಂದ್ರ ಜಡೇಜಾ!

jadeja pushpa web
Published on

ಲಖನೌ: ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ 3 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮರಳಿ ಕಣಕ್ಕಿಳಿದ ಜಡೇಜಾ, ಈ ವೇಳೆ ಜನಪ್ರಿಯ ಸಿನಿಮಾ ‘ಪುಷ್ಪ’ ಸ್ಟೈಲ್‌ನಲ್ಲಿ ಗಡ್ಡ ನೇವರಿಸುವ ಮೂಲಕ ಗಮನಸೆಳೆದಿದ್ದಾರೆ.

ಶ್ರೀಲಂಕಾ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಬ್ಯಾಟರ್ ದಿನೇಶ್ ಚಾಂಡಿಮಲ್ ವಿಕೆಟ್ ಕಬಳಿಸಿದ ಬೆನ್ನಲ್ಲೇ ಜಡೇಜಾ, ‘ತಗ್ಗೋದೇ ಇಲ್ಲ’ ಎಂಬ ಸನ್ನೆಯ ರೀತಿಯಲ್ಲಿ ಗಡ್ಡ ನೇವರಿಸಿ ‘ಪುಷ್ಪ’ ಸಿನಿಮಾದ ಹೀರೋ ಅಲ್ಲು ಅರ್ಜುನ್ ರೀತಿ ಮಿಂಚಿದರು. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿದರು.

ಜಡೇಜಾ ‘ಪುಷ್ಪ’ ಸಿನಿಮಾದ ಮೇಲೆ ಪ್ರೀತಿ ತೋರಿರುವುದು ಇದೇ ಮೊದಲಲ್ಲ. ಈ ಮುನ್ನ ಇನ್‌ಸ್ಟಾಗ್ರಾಂನಲ್ಲಿ ‘ತಗ್ಗೆದೆ ಲೇ’ ಡೈಲಾಗ್‌ನೊಂದಿಗೆ ಗಡ್ಡ ನೇವರಿಸುವ ವಿಡಿಯೋ ಪ್ರಕಟಿಸಿದ್ದರೆ, ಬಳಿಕ ಟ್ವಿಟರ್‌ನಲ್ಲಿ ಸಿನಿಮಾದ ಹೀರೋ ರೀತಿಯಲ್ಲೇ ಬೀಡಿಯನ್ನು ಬಾಯಲ್ಲಿ ಇಟ್ಟುಕೊಂಡು ಪೋಸ್ ನೀಡಿದ್ದರು. ಉತ್ತರ ಭಾರತದಲ್ಲೂ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾಗೆ ಸೌರಾಷ್ಟ್ರದ ಆಟಗಾರ ಫಿದಾ ಆಗಿರುವುದು ಇದರಿಂದ ಸ್ಪಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net