ಕಲಬುರಗಿಯಲ್ಲಿ ನ.೧೭ರಿಂದ ೨೪ರವರೆಗೆ ಐಟಿಎಫ್

ITF
Published on

ಅಚ್ಚುಕಟ್ಟಾಗಿ ನಿರ್ವಹಿಸಲು ಜಿ¯್ಲÁಧಿಕಾರಿ ಸೂಚನೆ | ಸಿದ್ಧತೆ ಸಭೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನ.೧೭ರಿಂದ ೨೪ರವರೆಗೆ ನಡೆಯುವ ಪ್ರತಿಷ್ಠಿತ ಐಟಿಎಫ್ ಕ್ರೀಡಾಕೂಟದಲ್ಲಿ ಲೋಪದೋಷವಿಲ್ಲದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚಿಸಿದರು.

ಜಿ¯್ಲÁಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಸಮಿತಿಗಳ ಸಭೆ ನಡೆಸಿ, ಸಮಿತಿ ಪ್ರಕಾರ ಕೆಲಸಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಹಣಕಾಸು ಸಮಿತಿಗೆ ಅಧ್ಯP್ಷÀರಾಗಿ ಜಿ¯್ಲÁಧಿಕಾರಿ, ಸಂಚಾಲಕರಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ, ಮೈದಾನ, ವೇದಿಕೆ, ಸೈನ್ ಬೋರ್ಡ್ ಸಿದ್ಧತೆ, ಸ್ವಾಗತ ಸಮಿತಿಗೆ ಜೆಸ್ಕಾಂ ಪ್ರಧಾನ ವ್ಯವಸ್ಥಾಪಕರಿಗೆ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಒಳಗೊಂಡ ಸಮಿತಿ ಸಿದ್ಧತೆ ಮಾಹಿತಿ ಪಡೆದು ಕಾರ್ಯೋನ್ಮುಖವಾಗುವಂತೆ ತಿಳಿಸಿದರು.

ಮೈದಾನದ ಸ್ವಚ್ಫತೆ, ಉಪ ವೇದಿಕೆಗಳ ಸಿದ್ಧತೆ, ಗ್ರೀನ್ ಮ್ಯಾಟ್‌ಗಳ ಅಳವಡಿಕೆ, ಮೈಕ್, ಬ್ಯಾರಿಕೇಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೈನ್ ಬೋರ್ಡ್ ಅಭ್ಯಾಸಕ್ಕೆ ಕಲ್ಪಿಸುವುದು.

ಸಾರಿಗೆ, ವಾಹನ ನಿಲುಗಡೆ ಸಮಿತಿಯನ್ನು ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ರಚಿಸಿ, ಸಾರಿಗೆ ವ್ಯವಸ್ಥೆ ಸಮಸ್ಯೆ ಆಗದಂತೆ ನಿರ್ವಹಿಸಬೇಕು ಎಂದರು. ಆರೋಗ್ಯ ಸಮಿತಿ ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಧ್ಯP್ಷÀತೆಯಲ್ಲಿ ರಚಿಸಿ, ಕ್ರೀಡಾಪಟುಗಳಿಗೆ ಆರೋಗ್ಯ ಸಂಬAಧಿಸಿದ ತಯಾರಿ ನಡೆಸಲು ಸೂಚಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಚಾರ ಸಮಿತಿಯನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಭಾಗವಹಿಸುವಂತೆ ಪ್ರಚಾರ ನೀಡಲು ಸೂಚಿಸಿದರು. ೧೪ ಸಮಿತಿಗಳು ಒಟ್ಟುಗೂಡಿ ಕೆಲಸ ಮಾಡಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ, ಅಪರ ಜಿ¯್ಲÁಧಿಕಾರಿ ರಾಯಪ್ಪ ಹುಣಸಗಿ, ಜೆಸ್ಕಾಂ ಪ್ರಧಾನ ವ್ಯವಸ್ಥಾಪಕ ಆಶಪ್ಪ ಪೂಜಾರಿ, ಸಹಾಯಕ ಆಯುಕ್ತೆ ಸಾಹಿತ್ಯ, ಡಿಎಚ್‌ಓ ಶರಣಬಸಪ್ಪ ಖ್ಯಾತನಾಳ, ಜಿಪಂ ನಿರ್ದೇಶಕ ಜಗದೇವಪ್ಪ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಅಬ್ದುಲ್ ಅಜೀಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net