ಐಟಿಎಫ್ ಪ್ರಶಸ್ತಿ ಜಯಿಸಿದ ಅಂಕಿತಾ ರೈನಾ; ಸಿಂಗಲ್ಸ್-ಡಬಲ್ಸ್ ವಿಭಾಗದಲ್ಲಿ ಭಾರತದ ಆಟಗಾರ್ತಿ ಚಾಂಪಿಯನ್

RAINA
Published on

ನವದೆಹಲಿ: ಭಾರತದ ಅಗ್ರ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ವರ್ಷದ ಮೊದಲ ಐಟಿಎಫ್ ಪ್ರಶಸ್ತಿ ಗೆಲುವಿನ ಸಾಧನೆ ಮಾಡಿದ್ದಾರೆ. ಥಾಯ್ಲೆಂಡ್​ನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅವರು ಫ್ರಾನ್ಸ್​ನ ಕ್ಲೋಯಿ ಪಾಕ್ವೆಟ್ ವಿರುದ್ಧ ಗೆದ್ದು ಪ್ರಶಸ್ತಿ ವಶಪಡಿಸಿಕೊಂಡರು. ಇದು ಅವರಿಗೆ ವೃತ್ತಿಜೀವನದ 10ನೇ ಸಿಂಗಲ್ಸ್ ಪ್ರಶಸ್ತಿ ಗೆಲುವಾಗಿದೆ.

3ನೇ ಶ್ರೇಯಾಂಕಿತೆ ಅಂಕಿತಾ ರೈನಾ 6-3, 7-5 ನೇರಸೆಟ್​ಗಳಿಂದ 4ನೇ ಶ್ರೇಯಾಂಕಿತೆ ಪಾಕ್ವೆಟ್ ವಿರುದ್ಧ ಗೆಲುವು ದಾಖಲಿಸಿದರು. ಪಾಕ್ವೆಟ್ ವಿರುದ್ಧದ ಹಿಂದಿನ 2 ಮುಖಾಮುಖಿಗಳಲ್ಲಿ ಸೋತಿದ್ದ ಅಂಕಿತಾ, ಮೊದಲ ಗೆಲುವು ಒಲಿಸಿಕೊಂಡರು. ಇದಕ್ಕೂ ಮುನ್ನ ಅಂಕಿತಾ ಕೂಟದ ಡಬಲ್ಸ್ ವಿಭಾಗದಲ್ಲೂ ನೆದರ್ಲೆಂಡ್​ನ ಬಿಬಿಯಾನೆ ಸ್ಕೂಪ್ಸ್ ಜತೆಗೂಡಿ ಪ್ರಶಸ್ತಿ ಜಯಿಸಿದ್ದರು.

‘2020ರಲ್ಲಿ ಸಕಾರಾತ್ಮಕ ಆರಂಭ ದೊರೆತಿದೆ. ಕಳೆದ ವರ್ಷಾಂತ್ಯದಲ್ಲೂ ಗೆಲುವು ಕಂಡಿದ್ದೆ. ಆದರೆ ಟೂರ್ನಿಗೆ ಸಿದ್ಧತೆ ನಡೆಸಲು ಹೆಚ್ಚು ಸಮಯ ಲಭಿಸಿರಲಿಲ್ಲ’ ಎಂದು 27 ವರ್ಷದ ಅಂಕಿತಾ ಹೇಳಿದರು. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net