

ನವದೆಹಲಿ: ಹತ್ತು ವಿಕೆಟ್ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಾಕಷ್ಟು ಚರ್ಚೆಯಾಯಿತು.
ಮೂರನೇ ಕ್ರಮಾಂಕದಲ್ಲಿ ಆಡಬೇಕಿದ್ದ ಕೊಹ್ಲಿ, ಕೆ.ಎಲ್.ರಾಹುಲ್ರನ್ನು ಕಣಕ್ಕಿಳಿಸಿ ತಾನು ನಾಲ್ಕನೇ ಕ್ರಮಾಂಕದಲ್ಲಿ ಇಳಿದರು. ಕೇವಲ 16 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಲಿಯನ್ ಸೇರಿದರು. ಇದು ಇಂಡಿಯಾ ಸೋಲಿಗೆ ಕಾರಣವಾಯಿತು ಎಂಬುದು ಅನೇಕರ ಅಭಿಪ್ರಾಯವಾಯಿತು. ಹಿರಿಯ ಕ್ರಿಕೆಟಿಗರು ಕೂಡ ಅಸಮಾಧಾನ ಹೊರಹಾಕಿದ್ದರು.
ಇದೇ ವೇಳೆ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಪ್ರಖ್ಯಾತ ಲೇಖಕಿ ಭಾವನಾ ಅರೋರ ಅವರು ಆಕ್ಷೇಪಾರ್ಹ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಟ್ರೋಲ್ ದಾಳಕ್ಕೆ ಸಿಲುಕಿದ್ದಾರೆ.
ನಿನ್ನೆ ಟ್ವೀಟ್ ಮಾಡಿರುವ ಭಾವನಾ ಅರೋರ, ಆಸ್ಟ್ರೇಲಿಯಾದವರೊಂದಿಗೆ ಕೊಹ್ಲಿ ವಿವಿಧ ಪೊಸಿಷನ್ ಪ್ರಯತ್ನಿಸುತ್ತಿರುವುದು ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಸಂತಸ ತಂದಿಲ್ಲ. ಯಾಕೆಂದರೆ ಅನುಷ್ಕಾರೊಂದಿಗೆ ಪ್ರಯತ್ನಿಸದೇ ಆಸ್ಟ್ರೇಲಿಯಾದವರೊಂದಿಗೆ ಪ್ರಯತ್ನಿಸಿರುವುದು ಅನುಷ್ಕಾಗೆ ಕೊಹ್ಲಿ ಮೇಲೆ ಸಿಟ್ಟು ಬಂದಿದೆ ಎಂದು ವ್ಯಂಗ್ಯವಾಡಿದ್ದರು. ಇಲ್ಲಿ ಅರೋರ, ಸೆಕ್ಸ್ ಪೊಷಿಸನ್ ಬಗ್ಗೆ ಟ್ವೀಟ್ ಮಾಡಿ ಪರೋಕ್ಷವಾಗಿ ಕೊಹ್ಲಿಯನ್ನು ಹಾಗೂ ಅನುಷ್ಕಾರನ್ನು ಕುಟುಕಿದ್ದರು.
ಇದಾದ ಬೆನ್ನಲ್ಲೇ ಭಾವನಾ ಅರೋರ ಮಾಡಿರುವ ಟ್ವೀಟ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಲೇಖಕಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆದುಕೊಂಡಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. ಹೀಗೆ ಭಾವನಾ ಅರೋರ ಅವರನ್ನು ಮನಬಂದಂತೆ ಟ್ರೋಲ್ ಮಾಡಿದ್ದಾರೆ. (ಏಜೆನ್ಸೀಸ್)