ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಇರ್ಫಾನ್​ ಪಠಾಣ್ ಕಾಡುತ್ತಿರುವ ನೋವೇನು?

Irfan 18 dec 19
Published on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶನಿವಾರ ವಿದಾಯ ಘೋಷಿಸಿರುವ ಟೀಮ್​ ಇಂಡಿಯಾ ಆಲ್​ರೌಂಡರ್ ಇರ್ಫಾನ್​ ಪಠಾಣ್, ಇತರರು ಟೀಮ್​ ಇಂಡಿಯಾಗೆ ಪಾದಾರ್ಪಣೆ ಮಾಡುತ್ತಿರುವ ವಯಸ್ಸಲ್ಲಿ ನನ್ನ ಕ್ರಿಕೆಟ್​ ಕೆರಿಯರ್​ ಮುಗಿಯಿತಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕೆಲವರು 27-28ನೇ ವಯಸ್ಸಿನಲ್ಲಿ ಕೆರಿಯರ್​ ಆರಂಭಿಸಿ 35ರವರೆಗೂ ತಂಡದಲ್ಲಿ ಆಡುತ್ತಾರೆ. ನನಗೆ 27 ವಯಸ್ಸು ಆಗಿದ್ದಾಗಲೂ 301 ಅಂತಾರಾಷ್ಟ್ರೀಯ ವಿಕೆಟ್​ ತೆಗೆದಿದ್ದರೂ ಆಗಿದ್ದೇನು? ಇದೇ ನನ್ನನ್ನು ಕಾಡುವ ಸಂಗತಿ ಎಂದಿದ್ದಾರೆ.

27ನೇ ವಯಸ್ಸಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಇರ್ಫಾನ್​ ಕೆರಿಯರ್​ನಲ್ಲಿ ಸಾಕಷ್ಟು ಅವಕಾಶಗಳು ಬರಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಒದಗಿ ಬರಲಿಲ್ಲ. ಈ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ, ಮತ್ತೆ ತಂಡ ಸೇರುವುದನ್ನು ಎದುರು ನೋಡುತ್ತಿದ್ದೆ. ಆದರೆ ಸಾಧ್ಯವಾಗಲಿಲ್ಲ ಎಂದು ಇರ್ಫಾನ್​ ಬೇಸರ ವ್ಯಕ್ತಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net