'ಅಧಿಕಾರ ಕೊಟ್ಟೋರು ಯಾರು?'-ಮಾಜಿ ಬೌಲರ್​ ಇರ್ಫಾನ್ ಪಠಾಣ್​ ಆಕ್ರೋಶ

Irfan
Published on

ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್​.ಧೋನಿ ಸರಿಯಾಗಿ ಆಟವಾಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಪುಟ್ಟ ಮಗಳು ಝಿವಾಗೆ ವ್ಯಕ್ತಿಯೋರ್ವ ಅತ್ಯಾಚಾರ ಬೆದರಿಕೆ ಹಾಕಿದ ಅಸಹ್ಯ ಘಟನೆ ನಡೆದಿದೆ.

ನಿನ್ನೆ ಇನ್ಸ್ಟಾಗ್ರಾಂನಲ್ಲಿ ಓರ್ವ ಝಿವಾಗೆ ರೇಪ್​ ಬೆದರಿಕೆ ಹಾಕಿದ್ದನ್ನು ಅನೇಕರು ಖಂಡಿಸಿದ್ದಾರೆ. ಆತನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ. ಅತ್ಯಾಚಾರ ಬೆದರಿಕೆ ಹಾಕಿದವನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಎಲ್ಲೆಡೆಯಿಂದ ಕೇಳಿಬಂದಿದೆ.

ಯಾವುದೇ ಆಟಗಾರ ಸೋತರೆ, ಚೆನ್ನಾಗಿ ಆಡಲಿಲ್ಲ ಎಂದಾದರೆ ಅವರ ಕುಟುಂಬದವರನ್ನು ಟ್ರೋಲ್ ಮಾಡುವುದು ಏಕೆ? ಅದರಲ್ಲೂ ಇಂಥ ಕ್ರೂರ, ಅಸಹ್ಯಕರ ಬೆದರಿಕೆಗಳನ್ನು ಹಾಕುವುದು ಎಷ್ಟು ಸರಿ ಎಂಬಂಥ ಪ್ರಶ್ನೆಗಳನ್ನೂ ಎತ್ತಿದ್ದಾರೆ.

ಈ ಬಗ್ಗೆ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್​ ಇರ್ಫಾನ್​ ಪಠಾಣ್ ಕೂಡ ಟ್ವೀಟ್​ ಮಾಡಿದ್ದು, ಎಲ್ಲ ಕ್ರಿಕೆಟ್​ ಆಟಗಾರರೂ ಅವರ ಕೈಲಾದಷ್ಟು ಪ್ರಯತ್ನ ಹಾಕಿ, ಉತ್ತಮವಾಗಿಯೇ ಆಡುತ್ತಾರೆ. ಆದರೂ ಕೆಲವೊಮ್ಮೆ ವಿಫಲರಾಗುತ್ತಾರೆ. ಆದರೆ ಅದೇ ವಿಚಾರಕ್ಕೆ ಇಷ್ಟು ಪುಟ್ಟ ಮಗುವಿಗೆ ಬೆದರಿಕೆ ಹಾಕುವ ಅಧಿಕಾರ ಯಾರಿಗೂ ಇಲ್ಲ. ಗೌರವ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net