ತಮ್ಮ ಮಾತನ್ನು ಮುಕ್ತಾಯಗೊಳಿಸಿದ ಪಾಟೀದಾರ್, ತಂಡವು ಸದ್ಯ ಅಂಕಪಟ್ಟಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಮತ್ತು ಅಂಕಗಳಿಗಿಂತ ಹೆಚ್ಚಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಕ್ರಿಕೆಟ್ ಆಡುವುದರತ್ತ ಗಮನಹರಿಸುತ್ತಿರುವುದಾಗಿ ತಿಳಿಸಿದರು. ಬೌಲರ್‌ಗಳು ಮುಂಬೈ ತಂಡವನ್ನು 166 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ ಮತ್ತು ಆ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು. "ನಮ್ಮಲ್ಲಿ ಅತ್ಯಂತ ಕೌಶಲಪೂರ್ಣ ಬ್ಯಾಟಿಂಗ್ ಫಿರಂಗಿ ಪಡೆಯೇ ಇದೆ, ಆದ್ದರಿಂದ ಪಿಚ್ ಅಥವಾ ಪರಿಸ್ಥಿತಿ ಯಾವುದೇ ಇರಲಿ ಈ ಗುರಿಯನ್ನು ನಾವು ಅರಾಮವಾಗಿ ತಲುಪಬೇಕಿತ್ತು; ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಂತಿಮ ಎಸೆತದವರೆಗೂ ಹೋರಾಡಬೇಕಾಗಿ ಬಂದ ಕಾರಣ ಈ ಪಂದ್ಯವನ್ನು ನಾವು ಗೆಲ್ಲಲು ಅರ್ಹರಲ್ಲ ಎಂದು ನನಗನ್ನಿಸುತ್ತದೆ" ಎಂದು ಹೇಳುವ ಮೂಲಕ ತಂಡದ ಬ್ಯಾಟಿಂಗ್ ಪ್ರದರ್ಶನ ಇನ್ನಷ್ಟು ಸುಧಾರಿಸಬೇಕಿದೆ ಎಂಬ ಆಶಯವನ್ನು ಪಾಟೀದಾರ್ ವ್ಯಕ್ತಪಡಿಸಿದರು, (ಏಜೆನ್ಸೀಸ್).