ಇಂತಹ ಸವಾಲಿನ ಸಮಯದಲ್ಲಿ ಬಿಸಿಸಿಐ ಮತ್ತು ತಂಡದ ಮ್ಯಾನೇಜ್‌ಮೆಂಟ್ ಯುವ ಆಟಗಾರರ ಬೆನ್ನಿಗೆ ನಿಂತು, ನಾವಿದ್ದೇವೆ, ಯಾವುದೇ ಆತುರ ಬೇಡ ಎಂಬ ಭರವಸೆ ನೀಡುವ ಅಗತ್ಯವಿದೆ. ಕ್ರೀಡಾ ವಲಯದಲ್ಲಿ ಎದುರಾಗುವ ಒತ್ತಡ ಹಾಗೂ ಆತಂಕವನ್ನು ಒಂದು ದೊಡ್ಡ ಸಮಸ್ಯೆಯಾಗಿ ನೋಡದೆ, ಅದು ಆಟದ ಒಂದು ಭಾಗ ಎಂದು ಪರಿಗಣಿಸಿ, ಅದನ್ನು ಎದುರಿಸಲು ಮಾನಸಿಕ ಸಿದ್ಧತೆಯನ್ನು ಆಟಗಾರರ ದೈನಂದಿನ ದಿನಚರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಕ್ರಿಕೆಟ್ ತಜ್ಞರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್).