ಇಂದು ಭಾರತ-ನ್ಯೂಜಿಲೆಂಡ್​ 2ನೇ ಟಿ20: ವೈಭವ್​ ಆಡುವ ನಿರೀಕ್ಷೆ

ಚುಟುಕು ಕ್ರಿಕೆಟ್​ನಲ್ಲಿ ತನ್ನ ಸರ್ವಾಧಿಕ ಮೊತ್ತದ ಯಶಸ್ವಿ ಚೇಸಿಂಗ್​ನೊಂದಿಗೆ ಕಿವೀಸ್​ ಪ್ರವಾಸದಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ. ಶ್ರೇಯಸ್​ ಅಯ್ಯರ್​ ಪಡೆ ಶನಿವಾರ ಆತಿಥೇಯ ನ್ಯೂಜಿಲೆಂಡ್​ ಎದುರು ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿಯಲ್ಲಿ ಮುನ್ನಡೆ ವಿಸ್ತರಿಸಿಕೊಳ್ಳುವ ಹಂಬಲದಲ್ಲಿದೆ.
ಕೋಚ್ ಸಿತಾಂಶು ಜತೆ ವೈಭವ್
ಕೋಚ್ ಸಿತಾಂಶು ಜತೆ ವೈಭವ್
Published on: 

ಕ್ರೈಸ್ಟ್​ಚರ್ಚ್​: ಚುಟುಕು ಕ್ರಿಕೆಟ್​ನಲ್ಲಿ ತನ್ನ ಸರ್ವಾಧಿಕ ಮೊತ್ತದ ಯಶಸ್ವಿ ಚೇಸಿಂಗ್​ನೊಂದಿಗೆ ಕಿವೀಸ್​ ಪ್ರವಾಸದಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ. ಶ್ರೇಯಸ್​ ಅಯ್ಯರ್​ ಪಡೆ ಶನಿವಾರ ಆತಿಥೇಯ ನ್ಯೂಜಿಲೆಂಡ್​ ಎದುರು ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿಯಲ್ಲಿ ಮುನ್ನಡೆ ವಿಸ್ತರಿಸಿಕೊಳ್ಳುವ ಹಂಬಲದಲ್ಲಿದೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ರಿಂದ ಮೇಲುಗೈ ಸಾಧಿಸಿದರೂ, ಬೌಲಿಂಗ್​ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ. ಆರಂಭಿಕ ಪಂದ್ಯದಲ್ಲಿ ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ ಸಹಿತ ಎಲ್ಲ ಬೌಲರ್​ಗಳು ಪ್ರತಿ ಓವರ್​ 10ರ ಸರಾಸರಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದರು. ಆಲ್ರೌಂಡರ್​ಗಳು ಬೌಲಿಂಗ್​ನಲ್ಲಿ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂಬುದು ಚಿಂತೆಯ ವಿಷಯವಾಗಿದ್ದು, ನಿತೀಶ್​ ಕುಮಾರ್​ ರೆಡ್ಡಿ 4 ಓವರ್​ ಕೋಟಾದಲ್ಲಿ ಯಾವುದೇ ವಿಕೆಟ್​ ಪಡೆಯದೆ 40 ರನ್​ ನೀಡಿದ್ದರು. 4 ವರ್ಷದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿರುವ ಭುವನೇಶ್ವರ್​ ಲಯಕ್ಕೆ ಮರಳಬೇಕಿದ್ದು, ಪವರ್​ ಪ್ಲೇಯಲ್ಲಿ ಕಿವೀಸ್​ ರನ್​ಗಳಿಕೆಗೆ ನಿಯಂತ್ರಣ ಹೇರಬೇಕು. ಸಂಜು ಸ್ಯಾಮ್ಸನ್​, ಅಭಿಷೇಕ್​ ಶರ್ಮ, ಶ್ರೇಯಸ್​ ಅಯ್ಯರ್​ ಉತ್ತಮ ಲಯದಲ್ಲಿದ್ದು, 8ನೇ ಕ್ರಮಾಂಕದವರೆಗೈ ಬ್ಯಾಟಿಂಗ್​ ಕ್ರಮಾಂಕ ಹೊಂದಿರುವುದು ಭಾರತ ತಂಡಕ್ಕೆ ದೊಡ್ಡ ಬಲ ಎನಿಸಿದೆ. ಇಬ್ಬನಿಯ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಗೆಲುವಿನ ಸನಿಹ ಎಡವಿರುವ ಮಿಚೆಲ್​ ಸ್ಯಾಂಟ್ನರ್​ ಪಡೆ ಪುಟಿದೇಳುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಛಲದಲ್ಲಿದೆ.

ಫಿನ್​ ಅಲೆನ್​, ಟಿಮ್​ ಸೀರ್ಟ್​ ಜತೆಗೆ ಗ್ಲೆನ್​ ಫಿಲಿಪ್ಸ್​ ಎದುರು ಭಾರತೀಯ ಬೌಲರ್​ಗಳಿಗೆ ಸತ್ವ ಪರೀೆ ಎದುರಾಗಲಿದೆ.

ವೈಭವ್​ ಕಣಕ್ಕಿಳಿಯುವ ಸೂಚನೆ

ಬ್ಯಾಟಿಂಗ್​ ಸೆನ್ಸೇಶನ್​ 15 ವರ್ಷದ ವೈಭವ್​ ಸೂರ್ಯವಂಶಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀೆ ಹರಡಿದೆ. ಇಶಾನ್​ ಕಿಶನ್​ ಬಲಗೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಶನಿವಾರದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. "ಕಿಶನ್​ ಫಿಟ್​ ಆಗದಿದ್ದರೆ, ವೈಭವ್​ ಅವಕಾಶ ಪಡೆಯಲಿದ್ದಾರೆ' ಎಂದಿರುವ ಬ್ಯಾಟಿಂಗ್​ ಕೋಚ್​ ಸಿತಾಂಶು ಕೋಟಕ್​, ವೈಭವ್​ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ತಿಲಕ್​ ವರ್ಮ 5ನೇ ಕ್ರಮಾಂಕಕ್ಕೆ ಮರಳುವ ನಿರೀೆ ಇದೆ.

ಟೀಮ್​ ನ್ಯೂಸ್​

ಭಾರತ: ಬಲಗೈ ನೋವಿನ ಸಮಸ್ಯೆಯಿಂದಾಗಿ ಇಶಾನ್​ ಕಿಶನ್​ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದು, 11ರ ಬಳಗದಲ್ಲಿ ಬದಲಾವಣೆ ಖಚಿತವೆನಿಸಿದೆ. ಇಶಾನ್​ ಸ್ಥಾನಕ್ಕೆ ವೈಭವ್​ ಸೂರ್ಯವಂಶಿ ಮತ್ತು ಶಿವಂ ದುಬೆ ನಡುವೆ ಸ್ಪರ್ಧೆ ಇದೆ. ವೈಭವ್​ ಅವಕಾಶ ಪಡೆದರೆ, ಅಭಿಷೇಕ್​ ಜತೆಯಾಗಿ ಇನಿಂಗ್ಸ್​ ಆರಂಭಿಸಲಿದ್ದಾರೆ. ಸಂಜು ಸ್ಯಾಮ್ಸನ್​ ಮೂರನೇ ಕ್ರಮಾಂಕದಲ್ಲಿ ಆಡುವ ನಿರೀೆ ಇದೆ. ಉಳಿದಂತೆ ಬೌಲಿಂಗ್​ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನಿಸಿದೆ.

ನ್ಯೂಜಿಲೆಂಡ್​: ಕೊನೇ ಓವರ್​ವರೆಗೂ ಗೆಲುವಿಗೆ ಹೋರಾಟ ನಡೆಸಿದ ಆಡುವ 11ರ ಬಳಗದಲ್ಲಿ ಪ್ರಯೋಗ ಸಾಧ್ಯತೆ ಇಲ್ಲ. ಸರಣಿಯ ಆರಂಭದಲ್ಲಿ ಬದಲಾವಣೆ ನಡೆಸುವ ನಿರೀೆಯೂ ಕಡಿಮೆ ಎನಿಸಿದೆ.

ಆರಂಭ: ಮಧ್ಯಾಹ್ನ 12.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​

199. ಭಾರತ ತಂಡ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದುವರೆಗೆ 199 ಗೆಲುವು ದಾಖಲಿಸಿದ್ದು, ಇನ್ನೊಂದು ಜಯ 200 ಪಂದ್ಯ ಗೆದ್ದ ಮೊದಲ ತಂಡ ದಾಖಲೆ ರಚಿಸಲಿದೆ.

ಪಿಚ್​ ರಿಪೋರ್ಟ್​

ಶನಿವಾರ ಸಹಿತ ಸರಣಿಯ ಎಲ್ಲ ಪಂದ್ಯಗಳ ಸ್ಥಳಿಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಇಬ್ಬನಿ ಸಮಸ್ಯೆ ಪ್ರಮುಖ ಪಾತ್ರವಹಿಸಲಿದೆ. ಗುರುವಾರ ನಡೆದ ಪಿಚ್​ನಲ್ಲಿಯೇ ಎರಡನೇ ಪಂದ್ಯ ನಡೆಯಲಿದ್ದು, ಬ್ಯಾಟಿಂಗ್​ ಸ್ನೇಹಿ ಆಗಿರಲಿದೆ. ಟಾಸ್​ ಗೆದ್ದ ತಂಡ ಚೇಸಿಂಗ್​ ಆಯ್ಕೆ ಮಾಡಿಳ್ಳುವ ಸಾಧ್ಯತೆ ಹೆಚ್ಚಿದೆ. ಪಂದ್ಯಕ್ಕೆ ಮಳೆ ಭೀತಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net