ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್, ಎಸ್ಆರ್ಎಚ್ಗೆ ಬ್ಯಾಟಿಂಗ್ ಮಾಡುವಂತೆ ತಿಳಿಸಿತು. ಅಂತೆಯೇ, ಕಣಕ್ಕಿಳಿದ ಓಪನರ್ಗಳಾದ ಅಭಿಷೇಕ್ ಶರ್ಮ ಮತ್ತು ಟ್ರಾವಿಸ್ ಹೆಡ್, ಆರಂಭದ ಆರು ಓವರ್ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪವರ್‌ಪ್ಲೇ ಮುಗಿಯುವುದರೊಳಗೆ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ 105 ರನ್ ಗಳಿಸಿತು. ಅಭಿಷೇಕ್ ಶರ್ಮ ಕೇವಲ 22 ಎಸೆತಗಳಲ್ಲಿ 66 ರನ್ ಗಳಿಸಿದರೆ, ಟ್ರಾವಿಸ್ 15 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಈ ದಾಖಲೆಗೆ ಸಾಕ್ಷಿಯಾದರು.