ಇನ್ನು ಈ ಸುನಾಮಿ ಇನ್ನಿಂಗ್ಸ್‌ನೊಂದಿಗೆ, ಸರ್ಫರಾಜ್ ಖಾನ್ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ವೇಗವಾಗಿ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸರ್ಫರಾಜ್ ಪಾತ್ರರಾಗಿದ್ದಾರೆ. ಈ ದಾಖಲೆ ಈ ಹಿಂದೆ ರೋಹಿತ್ ಹೆಸರಿನಲ್ಲಿತ್ತು. ಇತ್ತೀಚೆಗೆ, ಸಿಕ್ಕಿಂ ವಿರುದ್ಧ ರೋಹಿತ್ ಕೇವಲ 62 ಎಸೆತಗಳಲ್ಲಿ ಶತಕ ಗಳಿಸಿದರು. ದೀರ್ಘಕಾಲದಿಂದ ಭಾರತ ತಂಡದಿಂದ ದೂರವಿದ್ದ ಸರ್ಫರಾಜ್, ಗೋವಾ ವಿರುದ್ಧ ಕೇವಲ 75 ಎಸೆತಗಳಲ್ಲಿ 157 ರನ್ ಗಳಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಒಂದು ಸಂದೇಶ ರವಾನಿಸಿದ್ದಾರೆ. ಅಂದಹಾಗೆ, ಇದೇ ಪಂದ್ಯದಲ್ಲಿ ಸರ್ಫರಾಜ್ ಸಹೋದರ ಮುಶೀರ್ ಖಾನ್ (60) ಕೂಡ ಗಮನ ಸೆಳೆದರು.