ನಮ್ಮ ಮಧ್ಯೆ ಆಗಿರುವುದಿಷ್ಟೇ...ಚಾಹಲ್​ರನ್ನು ಅನ್​ಫಾಲೋ ಮಾಡಿದ್ದಕ್ಕೆ ಕಾರಣ ತಿಳಿಸಿದ ಮಹಾವಶ್! Yuzvendra Chahal

ನಮ್ಮ ಮಧ್ಯೆ ಆಗಿರುವುದಿಷ್ಟೇ...ಚಾಹಲ್​ರನ್ನು ಅನ್​ಫಾಲೋ ಮಾಡಿದ್ದಕ್ಕೆ ಕಾರಣ ತಿಳಿಸಿದ ಮಹಾವಶ್! Yuzvendra Chahal
ನಮ್ಮ ಮಧ್ಯೆ ಆಗಿರುವುದಿಷ್ಟೇ...ಚಾಹಲ್​ರನ್ನು ಅನ್​ಫಾಲೋ ಮಾಡಿದ್ದಕ್ಕೆ ಕಾರಣ ತಿಳಿಸಿದ ಮಹಾವಶ್! Yuzvendra Chahal
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ದಂಪತಿ ವಿಚ್ಛೇದನ ಪಡೆದಿರುವುದು ಗೊತ್ತೇ ಇದೆ
  • ಡಿವೋರ್ಸ್​ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಹೆಸರು ಆರ್‌ಜೆ ಮಹಾವಶ್ ಜೊತೆ ಕೇಳಿಬಂತು
  • ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು
  • ಇದೀಗ ಅನ್​ಫಾಲೋ ಹಾಗೂ ಬ್ರೇಕಪ್ ಕುರಿತಾದ ವದಂತಿಗಳಿಗೆ ಮಹಾವಶ್​ ಸ್ಪಷ್ಟನೆ ನೀಡಿದ್ದಾರೆ​
Yuzvendra Chahal : ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ದಂಪತಿಯ ವಿಚ್ಛೇದನದ ಬಳಿಕ, ಚಾಹಲ್ ಹೆಸರು ಆರ್‌ಜೆ ಮಹಾವಶ್ (RJ Mahavash) ಜೊತೆ ಕೇಳಿಬಂದಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಒಟ್ಟಾಗಿ ಕ್ರೀಡಾಂಗಣದಲ್ಲೂ ಕಾಣಸಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಅವರಿಬ್ಬರು ಕೇವಲ ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿಕೊಂಡಿದ್ದರು. ಹೀಗಿರುವಾಗ, ಕೆಲವು ತಿಂಗಳುಗಳ ಹಿಂದೆ ಚಾಹಲ್ ಮತ್ತು ಆರ್‌ಜೆ ಮಹಾವಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು ಭಾರಿ ಸುದ್ದಿಯಾಯಿತು. ಇಬ್ಬರ ನಡುವೆ ವೈಮನಸ್ಸು ಮೂಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದವು. ಸದ್ಯ ಈ ಎಲ್ಲಾ ಚರ್ಚೆಗಳ ನಡುವೆ, ಆರ್‌ಜೆ ಮಹಾವಶ್ ಮೊದಲ ಬಾರಿಗೆ ಈ ವಿಷಯದ ಕುರಿತು ಮೌನ ಮುರಿದಿದ್ದಾರೆ.
'ಪಿಂಕ್‌ವಿಲ್ಲಾ' ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಆರ್‌ಜೆ ಮಹಾವಶ್ ಅವರು ಚಾಹಲ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಲು ಇದ್ದ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಜನರಿಗೆ ಸಣ್ಣ ವಿಷಯಗಳನ್ನೇ ದೊಡ್ಡದು ಮಾಡಿ ಹಬ್ಬಿಸುವ ಅಭ್ಯಾಸವಿರುತ್ತದೆ, ಆದರೆ ಇದು ಅಷ್ಟೊಂದು ದೊಡ್ಡ ವಿಚಾರವೇನಲ್ಲ, ಇಬ್ಬರು ಸ್ನೇಹಿತರ ನಡುವೆ ಸಣ್ಣ ಜಗಳ ನಡೆದಾಗ ಪರಸ್ಪರ ಅನ್‌ಫಾಲೋ ಮಾಡಿಕೊಳ್ಳುವುದು ಸಹಜ, ನಮ್ಮ ನಡುವೆ ಆಗಿರುವುದು ಅಷ್ಟೇ ಎಂದು ಮಹಾವಶ್​ ಹೇಳಿದರು.
ನಿಮ್ಮ ಸ್ನೇಹಿತನೊಂದಿಗೆ ನೀವು ಮುಕ್ತವಾಗಿ ಮಾತನಾಡಲು ಸಾಧ್ಯವಿರುವಾಗ ಯಾವುದೇ ದೂರು-ದುಮ್ಮಾನಗಳು ಉಳಿಯುವುದಿಲ್ಲ, ನಾನು ಯಾವಾಗಲೂ ಅವರಿಗಾಗಿ (ಚಾಹಲ್) ಪ್ರಾರ್ಥಿಸುತ್ತೇನೆ ಎಂದು ಹೇಳುವ ಮೂಲಕ ಮಹಾವಶ್ ಅವರು ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಚಾಹಲ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿರುವ ಆರ್‌ಜೆ ಮಹಾವಶ್, ನಮ್ಮ ನಡುವೆ ಕೇವಲ ಸ್ನೇಹವಿತ್ತಷ್ಟೇ, ಅದರಾಚೆಗೆ ಬೇರೇನೂ ಇರಲಿಲ್ಲ, ನಾನು ಅವರೊಬ್ಬ ಒಳ್ಳೆಯ ಸ್ನೇಹಿತೆಯಾಗಿದ್ದೆ. ಅವರು ವಿಚ್ಛೇದನ ಪಡೆಯುತ್ತಿದ್ದ ಆ ಕಠಿಣ ಸಮಯದಲ್ಲಿ ಅವರಿಗೆ ಒಬ್ಬ ಉತ್ತಮ ಸ್ನೇಹಿತನ ಅಗತ್ಯವಿತ್ತು, ಆ ಸಂದರ್ಭದಲ್ಲಿ ನಾನು ಅವರ ಜೊತೆಗಿದ್ದೆ. ಮುಂದೆಯೂ ನಾವು ಮೊದಲಿನಂತೆಯೇ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ ಮತ್ತು ಒಬ್ಬ ಸ್ನೇಹಿತೆಯಾಗಿ ನಾನು ಯಾವಾಗಲೂ ಅವರ ಬೆಂಬಲಕ್ಕೆ ಇರುತ್ತೇನೆ ಎಂದು ಮಹಾವಶ್​ ತಿಳಿಸಿದ್ದಾರೆ.
ಅಂದಹಾಗೆ, ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆದಿದ್ದಾರೆ. 2020ರ ಡಿಸೆಂಬರ್‌ನಲ್ಲಿ ವಿವಾಹವಾದ ಈ ದಂಪತಿ 2022ರ ಜೂನ್‌ನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪರಸ್ಪರ ಒಪ್ಪಿಗೆಯಿಂದ 2025ರ ಫೆಬ್ರವರಿ 5ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, 2025, ಮಾರ್ಚ್ 20ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು. ಚಾಹಲ್ ಅವರು ಧನಶ್ರೀಗೆ ಸುಮಾರು 4.75 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ ಎಂದು ವರದಿಗಳಿವೆ. ಇಬ್ಬರೂ ಖಾಸಗಿ ಜೀವನವನ್ನು ಗೌರವಿಸುವಂತೆ ಮನವಿ ಮಾಡಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net