ಪ್ರತಿ ವರ್ಷ ಇದೇ ಕಥೆ! ನಿಮ್ಮಿಂದ​ ಇದನ್ನೆಲ್ಲ ನಿರೀಕ್ಷಿಸಿರಲಿಲ್ಲ; ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಫ್ಯಾನ್ಸ್​ ಆಕ್ರೋಶ

ಆರ್​ಸಿಬಿ ಫ್ಯಾನ್ಸ್​ ಕಿಡಿ
ಆರ್​ಸಿಬಿ ಫ್ಯಾನ್ಸ್​ ಕಿಡಿ
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರ
  • ಓಪನಿಂಗ್ ಪಂದ್ಯಕ್ಕೆ ಟಿಕೆಟ್​ಗಳ ಬುಕ್ಕಿಂಗ್​ ಜೋರು
  • ಈ ಮಧ್ಯೆ ಒಂದಷ್ಟು ಅಭಿಮಾನಿಗಳಿಂದ ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ತೀವ್ರ ಬೇಸರ
RCB Tickets: ಮಾ.28ರಂದು ಆರಂಭವಾಗಲಿರುವ ಐಪಿಎಲ್​ 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಕಿಕ್​ಸ್ಟಾರ್ಟ್​​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಪಂದ್ಯದ ಟಿಕೆಟ್​ಗಳು ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದ್ದು, ಬುಕ್ಕಿಂಗ್ ಆದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಸೋಲ್ಡ್​ ಔಟ್ ಆಗಿದೆ ಎಂದು ತೋರಿಸಿರುವುದೇ ಸದ್ಯ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ​  
ಸನ್​ರೈಸರ್ಸ್​ ಹೈದರಾಬಾದ್​ ಎದುರು ಕಣಕ್ಕಿಳಿಯಲು ಸಜ್ಜಾಗಿರುವ ಆರ್‌ಸಿಬಿ, ತನ್ನ ತವರಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡುತ್ತಿರುವುದು ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣವಾಗಿದೆ. ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಆಸೆಯಲ್ಲಿ ಫ್ರಾಂಚೈಸಿಯ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂದಿನಿಂದಲೇ ಟಿಕೆಟ್​ ಪಡೆಯಲು ಫ್ಯಾನ್ಸ್​ ಮುಗಿಬಿದ್ದಿದ್ದು, 4 ಗಂಟೆಯ ಹೊತ್ತಿಗೆ ಲಾಗಿನ್​ ಆದರೂ ಟಿಕೆಟ್​ಗಳು ಇಲ್ಲ ಎಂದರೆ ಹೇಗೆ? ಅಭಿಮಾನಿಗಳಿಗೆ ಸಿಗ್ತಿಲ್ಲ ಎನ್ನುವುದಾದರೆ, ಮತ್ಯಾವ ಪ್ರಯೋಜನಕ್ಕೆ ಬುಕ್ಕಿಂಗ್ ತೆರೆಯಲಾಗಿದೆ ಎಂದು ಕೆಲ ಆರ್​ಸಿಬಿ ಫ್ಯಾನ್ಸ್​ ತಮ್ಮ ಬೇಸರ ಹೊರಹಾಕಿದ್ದಾರೆ. 
ಮತ್ತೊಬ್ಬರು ಟ್ವೀಟ್ ಮಾಡಿ, ಪ್ರತಿ ವರ್ಷದ ಐಪಿಎಲ್​ನಲ್ಲಿಯೂ ಹೀಗೆ ಆಗುತ್ತೆ. ಸ್ಟೇಡಿಯಂನ ಹಲವು ಸ್ಟ್ಯಾಂಡ್ಸ್​​ಗಳು ಅದಾಗಲೇ ಬ್ಲಾಕ್​ ಆಗಿವೆ. ಇಲ್ಲಿ ಬ್ಲ್ಯಾಕ್​ ಟಿಕೆಟ್​ಗಳ ಗೋಲ್​ಮಾಲ್​ ನಡೆದಿವೆ ಎಂದು ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿಕಾರಿದ್ದಾರೆ. ಇನ್ನೊಬ್ಬರು, ನಾನು ಎರಡು ಸೀಟ್​ಗೆ ಪೇಮೆಂಟ್​ ಮಾಡಿದ್ದೇನೆ. ಹಣ ಡೆಬಿಟ್ ಆಗಿದೆ. ಆದರೆ, ನಮ್ಮ ಸೀಟ್​ ಕನ್​ಫರ್ಮ್​ ಆಗಿಲ್ಲ. ದಯವಿಟ್ಟು ನಿಮ್ಮ ಸಿಸ್ಟಮ್ ಅನ್ನು ಮೊದಲು ಸರಿಪಡಿಸಿ ಎಂದು ಆರ್​ಸಿಬಿಯನ್ನು ಟ್ಯಾಗ್​ ಮಾಡಿ ಪ್ರಶ್ನಿಸುತ್ತಿದ್ದಾರೆ. 

ಅಷ್ಟಕ್ಕೂ ಟಿಕೆಟ್​ ಖರೀದಿ ಎಲ್ಲಿ?

ಕ್ರಿಕೆಟ್​ ಅಭಿಮಾನಿಗಳು ಪಂದ್ಯದ ಟಿಕೆಟ್‌ಗಳನ್ನು ಆರ್​ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಖರೀದಿಸುವುದು ಒಳಿತು ಎಂದು ಆರ್​ಸಿಬಿ ಇಂದು (ಮಾ.24) ಬೆಳಗ್ಗೆಯೇ ತಿಳಿಸಿತ್ತು. ಇಲ್ಲಿ ಮಾತ್ರ ಟಿಕೆಟ್​ಗಳು ಲಭ್ಯವಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಹೆಸರೇಳಿಕೊಂಡು ಬರುವ ನಕಲಿ ವೆಬ್​ಸೈಟ್​ಗಳಿಂದ ಮೋಸ ಹೋಗಬೇಡಿ. ಇಂತಜ ಆ್ಯಪ್​ ಅಥವಾ ವೆಬ್​ಸೈಟ್​ನಿಂದ ಟಿಕೆಟ್​ ಖರೀದಿಸಬೇಡಿ ಎಂದಿತ್ತು. ಆದರೀಗ, ಬುಕ್ಕಿಂಗ್​ನಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬಂದಿರುವುದು ಸದ್ಯ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net