ಆರ್​ಸಿಬಿ ಎಂಟ್ರಿ ಫಿಕ್ಸ್​! ಉಳಿದ 3 ಸ್ಥಾನಕ್ಕೆ ಎಷ್ಟು ಪಂದ್ಯ ಗೆಲ್ಲಬೇಕಿದೆ ಈ ತಂಡಗಳು? ಹೀಗಿದೆ ಪ್ಲೇಆಫ್​ ಲೆಕ್ಕಾಚಾರ

ಐಪಿಎಲ್​ ಪ್ಲೇಆಫ್​ ಲೆಕ್ಕಾಚಾರ
ಐಪಿಎಲ್​ ಪ್ಲೇಆಫ್​ ಲೆಕ್ಕಾಚಾರ
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್​ ಪ್ಲೇಆಫ್​ಗೆ ಎಂಟ್ರಿಕೊಟ್ಟ ಮೊದಲ ತಂಡ ಆರ್​​ಸಿಬಿ​
  • ಇನ್ನೂ ಮೂರು ಸ್ಥಾನಕ್ಕೆ 7 ತಂಡಗಳ ಪೈಪೋಟಿ
  • ಯಾವ ತಂಡ ಎಷ್ಟು ಗೆದ್ದರೆ ಎಂಟ್ರಿ ಸಾಧ್ಯ? ಹೀಗಿದೆ ಲೆಕ್ಕಾಚಾರ
IPL Playoffs: 19ನೇ ಆವೃತ್ತಿಯ ಐಪಿಎಲ್ ಪ್ಲೇಆಫ್​ ರೇಸ್​ನ ಪಂದ್ಯಗಳು ಬಲು ರೋಚಕವಾಗಿವೆ. ನಿನ್ನೆ (ಮೇ.17) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಪ್ಲೇಆಫ್‌ಗೆ ಲಗ್ಗೆಯಿಟ್ಟಿತು. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ ಮಣಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್​ ಲೆಕ್ಕಾಚಾರವನ್ನು ಕೊಂಚ ಬದಲಿಸಿದೆ.
ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಉಳಿದ ಮೂರು ಸ್ಥಾನಗಳಿಗಾಗಿ ಏಳು ತಂಡಗಳು ಇನ್ನೂ ಕಣದಲ್ಲಿವೆ. ಈ ರೇಸ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ಗೆ ಹೆಚ್ಚು ಅವಕಾಶವಿದ್ದು, ಉಳಿದಿರುವ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಿದ್ದರೆ, ಯಾವ ತಂಡಗಳು ಈಗಲೂ ಅವಕಾಶಗಳಿದೆ? ಎಷ್ಟು ಪಂದ್ಯಗಳನ್ನು ಗೆದ್ದರೆ ಲೆಕ್ಕಾಚಾರ ಬದಲಾಗಲಿದೆ ಎಂಬುದರ ವಿವರ ಇಲ್ಲಿದೆ ನೋಡಿ.

ಗುಜರಾತ್ ಟೈಟಾನ್ಸ್

ಈ ಸೀಸನ್​ನಲ್ಲಿ ಇಲ್ಲಿಯವರೆಗೆ 13 ಪಂದ್ಯಗಳನ್ನು ಆಡಿರುವ ಜಿಟಿ, 8 ಪಂದ್ಯಗಳನ್ನು ಗೆದ್ದಿದೆ ಮತ್ತು 5 ಪಂದ್ಯಗಳನ್ನು ಸೋತಿದೆ. ಅಲ್ಲಿಗೆ ಖಾತೆಯಲ್ಲಿ 16 ಅಂಕಗಳಿದ್ದು, ನಿವ್ವಳ ರನ್ ರೇಟ್ +0.400 ಆಗಿದೆ. ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಲಿರುವ ಗುಜರಾತ್ ಟೈಟಾನ್ಸ್​, ಕೊನೆಯ ಪಂದ್ಯವನ್ನು ಗೆದ್ದರೆ, 18 ಅಂಕಗಳೊಂದಿಗೆ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಲಲಿದೆ. ಇದಲ್ಲದೆ, ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನಕ್ಕೇರುವ ಅವಕಾಶ ಪಡೆಯಲಿದೆ.

ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ಇದುವರೆಗೆ 12 ಪಂದ್ಯಗಳನ್ನು ಆಡಿದೆ. 14 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದ್ದು, ಈ ಎರಡು ಪಂದ್ಯಗಳನ್ನು ಗೆದ್ದರೆ, ಅದು ಯಾವುದೇ ಡ್ರಾವನ್ನು ಲೆಕ್ಕಿಸದೆ ಪ್ಲೇಆಫ್‌ಗೆ ಪ್ರವೇಶಿಸಲಿದೆ. ಎರಡು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೂ, ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವಿದೆ. ಇದು ಉಳಿದ ತಂಡಗಳ ಡ್ರಾ ಮೇಲೆಯೂ ಅವಲಂಬಿಸಿದೆ. ಅದೇ ಎರಡೂ ಪಂದ್ಯಗಳಲ್ಲಿ ಸೋತರೆ, ಪ್ಲೇಆಫ್​ ಹಾದಿ ಕಠಿಣವಾಗಲಿದೆ.

ಪಂಜಾಬ್ ಕಿಂಗ್ಸ್

13 ಪಂದ್ಯಗಳನ್ನು ಆಡಿರುವ ಶ್ರೇಯಸ್​ ಅಯ್ಯರ್​ ಪಡೆ, 13 ಅಂಕಗಳೊಂದಿಗೆ ಪ್ರಸ್ತುತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್​ ವಿರುದ್ಧ ಆಡಬೇಕಿದೆ. ಈ ಪಂದ್ಯವನ್ನು ಗೆದ್ದರೆ, ಅದೇ ಸಮಯದಲ್ಲಿ, ಸಿಎಸ್​ಕೆ, ಆರ್​ಆರ್ ಅಥವಾ ಎಸ್​ಆರ್​ಎಚ್​ ತಂಡಗಳಲ್ಲಿ ಒಂದು ಮಾತ್ರ 15 ಅಂಕಗಳನ್ನು ದಾಟಬೇಕು. ಉಳಿದ ತಂಡಗಳು ಅದಕ್ಕಿಂತ ಕಡಿಮೆ ಅಂಕಗಳಲ್ಲಿ ಮುಗಿಸಬೇಕು. ಆಗ ಮಾತ್ರ ಪಂಜಾಬ್ ಪ್ಲೇಆಫ್‌ ಕನಸು ಜೀವಂತ. ಲೆಕ್ಕಾಚಾರದ ಪ್ರಕಾರ ಅಯ್ಯರ್​ ಪಡೆಯ ಎಂಟ್ರಿ ಬಹುತೇಕ ಅನುಮಾನವೇ.

ರಾಜಸ್ಥಾನ್ ರಾಯಲ್ಸ್

ಇದುವರೆಗೆ 12 ಪಂದ್ಯಗಳನ್ನು ಆಡಿರುವ ರಾಯಲ್ಸ್​, 12 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಅಲಂಕರಿಸಿದೆ. ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ಈ ಎರಡು ಪಂದ್ಯಗಳನ್ನು ಗೆದ್ದರೆ, 16 ಅಂಕಗಳೊಂದಿಗೆ ಪ್ಲೇಆಫ್ ತಲುಪುವ ಅವಕಾಶವಿದೆ. ಆದಾಗ್ಯೂ, ಉಳಿದ ತಂಡಗಳ ಗೆಲುವು ಇದನ್ನು ನಿರ್ಧರಿಸಲಿದೆ. ಅಂದರೆ, ಸಿಎಸ್​ಕೆ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕು, ಎಸ್​ಆರ್​ಎಚ್​, ಆರ್​ಸಿಬಿಯನ್ನು ಮಣಿಸಬೇಕು ಮತ್ತು ಆರ್​ಆರ್​ ಹೆಚ್ಚಿನ ರನ್ ರೇಟ್ ಆ ಎರಡು ತಂಡಗಳಿಗಿಂತ ಉತ್ತಮವಾಗಿರಬೇಕು. ಇಷ್ಟಾದರೆ ಸಾಧ್ಯತೆಗಳಿವೆ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 12 ಪಂದ್ಯಗಳನ್ನು ಆಡಿದ್ದು, 12 ಅಂಕಗಳೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳನ್ನು ಗೆದ್ದರೆ, ಪ್ಲೇಆಫ್ ತಲುಪುವ ಅವಕಾಶವಿದೆ. ಅದೇ ಸಮಯದಲ್ಲಿ, ಉಳಿದ ತಂಡಗಳು ಹೇಗೆ ಆಡಲಿವೆ ಎಂಬುದು ಇಲ್ಲಿ ಲೆಕ್ಕ.

ಡೆಲ್ಲಿ ಕ್ಯಾಪಿಟಲ್ಸ್

ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಪ್ಲೇಆಫ್ ಅವಕಾಶಗಳನ್ನು ಜೀವಂತವಾಗಿರಿಸಿಕೊಂಡಿದೆ. ಇದುವರೆಗೆ 13 ಪಂದ್ಯಗಳನ್ನು ಆಡಿರುವ ಡೆಲ್ಲಿ, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಕೆಕೆಆರ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದು, ಈ ಪಂದ್ಯವನ್ನು ಗೆದ್ದರೆ, ಪ್ಲೇಆಫ್‌ಗೆ ಹೋಗುವ ಅವಕಾಶವಿದೆ. ಆದರೂ ಕಷ್ಟವೇ.

ಕೋಲ್ಕತ ನೈಟ್ ರೈಡರ್ಸ್

ರಹಾನೆ ಪಡೆಗೆ ಪ್ಲೇಆಫ್​ ಮಾತು ದೂರವೇ. ಟೆಕ್ನಿಕಲಿ, ತಂಡವು ಪ್ಲೇಆಫ್ ರೇಸ್‌ನಲ್ಲಿದೆ. ಇಲ್ಲಿಯವರೆಗೆ 12 ಪಂದ್ಯಗಳಿಂದ 11 ಅಂಕಗಳನ್ನು ಹೊಂದಿದೆ. ತಮ್ಮ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೂ ಸಹ, 15 ಅಂಕಗಳನ್ನು ಗಳಿಸಲಿದೆ. ನಿವ್ವಳ ರನ್ ರೇಟ್​ ಅಗತ್ಯಕ್ಕಿಂತ ಕಡಿಮೆ ಇರುವುದರಿಂದ ಕೆಕೆಆರ್​ ಪ್ಲೇಆಫ್​ ಹಾದಿ ಮುರಿದು ಬೀಳುವುದು ಬಹುತೇಕ ಖಚಿತ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net