ಇದೇ ವಿಡಿಯೋದಲ್ಲಿ ಮಾತನಾಡಿದ ಅಶ್ವಿನ್, ಐಪಿಎಲ್ 2026ರ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿಗೆ ಕಾರಣರಾದ ಪ್ರಮುಖ ಐದು ಜನರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಆರ್ಸಿಬಿ ಮುಂದಿನ ದಿನಗಳಲ್ಲಿ ಸರಣಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಮರ್ಥ್ಯ ಹೊಂದಿದೆ. ರನ್ನರ್-ಅಪ್ ಆದ ಗುಜರಾತ್ ಟೈಟನ್ಸ್ ಕೂಡ ತಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆ ಪಡಬಹುದು. ಆದರೆ ಆರ್ಸಿಬಿಯ ಈ ಐತಿಹಾಸಿಕ ರನ್ ಚೇಸ್ ಮತ್ತು ಗೆಲುವಿನ ಕ್ರೆಡಿಟ್ ಅನ್ನು ನಾನು ಮುಖ್ಯವಾಗಿ ಐದು ಜನರಿಗೆ ನೀಡಲು ಬಯಸುತ್ತೇನೆ; ಅವರೇ ಆಂಡಿ ಫ್ಲವರ್, ಮೋ ಬೊಬಾಟ್, ದಿನೇಶ್ ಕಾರ್ತಿಕ್ ಮತ್ತು ಅವರ ಸಪೋರ್ಟ್ ಸ್ಟಾಫ್, ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ" ಎಂದು ಅಶ್ವಿನ್ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ, (ಏಜೆನ್ಸೀಸ್).