ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಫಿಲ್ ಸಾಲ್ಟ್ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ದೈತ್ಯ ಆಟಗಾರರನ್ನು ಒಳಗೊಂಡಿರುವ ಆರ್‌ಸಿಬಿ (RCB) ತಂಡದ ಬ್ಯಾಟಿಂಗ್ ಲೈನ್-ಅಪ್ ಅತ್ಯಂತ ಬಲಿಷ್ಠವಾಗಿದೆ. ಪಿಚ್ ಎಂತಹುದೇ ಇರಲಿ ಅಥವಾ ಎದುರಾಳಿ ಬೌಲರ್‌ಗಳ ತಂತ್ರ ಏನೇ ಇರಲಿ, ಈ ಎಲ್ಲಾ ಬ್ಯಾಟ್ಸ್‌ಮನ್‌ಗಳು ಒಂದೇ ಗೇರ್‌ನಲ್ಲಿ ಎದುರಾಳಿಗಳ ಮೇಲೆ ಮುಗಿಬೀಳುವ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದಾರೆ. ಇದೇ ಕಾರಣಕ್ಕೆ ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡದಷ್ಟು ಬೇರೆ ಯಾವುದೇ ತಂಡವೂ ಅತಿ ಹೆಚ್ಚು ಬಾರಿ 200 ಪ್ಲಸ್ ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿಲ್ಲ.