ಆಕಾಶ್​ ಅಂಬಾನಿ ಮುಖಕ್ಕೆ ಮೊಬೈಲ್​ ಎಸೆದ ಪಂಜಾಬ್​ ಕಿಂಗ್ಸ್​ ಫ್ಯಾನ್ಸ್​: ಆಕ್ರೋಶಗೊಂಡ ಅಂಬಾನಿ ಪುತ್ರ, ವಿಡಿಯೋ ವೈರಲ್​! Akash Ambani

ಆಕಾಶ್​ ಅಂಬಾನಿ ಮುಖಕ್ಕೆ ಮೊಬೈಲ್​ ಎಸೆದ ಪಂಜಾಬ್​ ಕಿಂಗ್ಸ್​ ಫ್ಯಾನ್ಸ್​: ಆಕ್ರೋಶಗೊಂಡ ಅಂಬಾನಿ ಪುತ್ರ, ವಿಡಿಯೋ ವೈರಲ್​! Akash Ambani
ಆಕಾಶ್​ ಅಂಬಾನಿ ಮುಖಕ್ಕೆ ಮೊಬೈಲ್​ ಎಸೆದ ಪಂಜಾಬ್​ ಕಿಂಗ್ಸ್​ ಫ್ಯಾನ್ಸ್​: ಆಕ್ರೋಶಗೊಂಡ ಅಂಬಾನಿ ಪುತ್ರ, ವಿಡಿಯೋ ವೈರಲ್​! Akash Ambani
Published on

ಪ್ರಮುಖ ಮುಖ್ಯಾಂಶಗಳು

  • ಪಂದ್ಯದ ಬಳಿಕ ಮುಂಬೈ ಮಾಲೀಕ ಆಕಾಶ್ ಅಂಬಾನಿ ಅವರತ್ತ ಅಭಿಮಾನಿಗಳು ಮೊಬೈಲ್ ಫೋನ್ ಎಸೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್
  • ಸ್ಟೇಡಿಯಂನಿಂದ ಹೊರಡುವಾಗ ಸೆಲ್ಫಿಗಾಗಿ ಫೋನ್ ನೀಡುವಂತೆ ಅಂಬಾನಿ ಸನ್ನೆ ಮಾಡಿದಾಗ ಅಭಿಮಾನಿಗಳು ಮೊಬೈಲ್ ಎಸೆದಿದ್ದಾರೆ ಎನ್ನಲಾಗಿದೆ
  • ಹರಿದಾಡುತ್ತಿರುವ ವಿಡಿಯೋ ಹಳೆಯ ಸೀಸನ್‌ನದ್ದಾಗಿದ್ದು, ಈಗ ತಪ್ಪು ಸಂದರ್ಭದಲ್ಲಿ ಹರಿಬಿಡಲಾಗಿದೆ ಎಂದೂ ಹೇಳಲಾಗುತ್ತಿದೆ
  • ಈ ಆಘಾತಕಾರಿ ಸೋಲಿನಿಂದಾಗಿ ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಹಾದಿ ಅತ್ಯಂತ ಕಠಿಣವಾಗಿದೆ
Akash Ambani : ಐಪಿಎಲ್ 2026ರ ಟೂರ್ನಿಯ ಶೇ. 75 ಕ್ಕೂ ಹೆಚ್ಚು ಪಂದ್ಯಗಳು ಮುಗಿದು ರೋಚಕ ಹಂತ ತಲುಪಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಬಾರಿ ಇನ್ನೂ ಯಾವುದೇ ತಂಡಗಳು ಅಧಿಕೃತವಾಗಿ ಪ್ಲೇಆಫ್​ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ನಿನ್ನೆ (ಮೇ 14) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ತಿಲಕ್ ವರ್ಮಾ ಅವರ ಭರ್ಜರಿ ಪ್ರದರ್ಶನದ ನೆರವಿನಿಂದ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರಿಂದ ಪಂಜಾಬ್​ ತಂಡದ ಪ್ಲೇ ಆಫ್​ ಹಾದಿ ಕಠಿಣವಾಗಿದೆ.
ಇನ್ನೂ ಈ ಪಂದ್ಯ ಮುಗಿದ ಬಳಿಕ ಸ್ಟೇಡಿಯಂನಲ್ಲಿ ಒಂದು ಅಹಿತಕರ ಘಟನೆ ನಡೆದಿದ್ದು, ಪಂಜಾಬ್ ತಂಡದ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಅವರ ಮೇಲೆ ಮೊಬೈಲ್ ಫೋನ್‌ಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಆಕಾಶ್ ಅಂಬಾನಿ ಅವರ ಸುರಕ್ಷತೆಗೆ ಧಕ್ಕೆ ತಂದ ಈ ಆಕ್ರೋಶದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಐಪಿಎಲ್ 2026ರ ಟೂರ್ನಿಯಲ್ಲಿ ಧರ್ಮಶಾಲಾದ ಮೈದಾನದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿತು. ಈ ಮಹತ್ವದ ಪಂದ್ಯದಲ್ಲಿ ಪಂಜಾಬ್ ತಂಡ ಸೋಲುತ್ತಿದ್ದಂತೆಯೇ ನಿರಾಶೆಗೊಂಡ ಅಭಿಮಾನಿಗಳ ಆಕ್ರೋಶ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಅವರತ್ತ ತಿರುಗಿತು ಎನ್ನಲಾದ ಘಟನೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯ ಮುಗಿದ ನಂತರ ಸ್ಟೇಡಿಯಂನಿಂದ ಹೊರಡುತ್ತಿದ್ದ ಆಕಾಶ್ ಅಂಬಾನಿ ಅವರ ಬಳಿ ಗ್ಯಾಲರಿಯಲ್ಲಿದ್ದ ಕೆಲವು ಅಭಿಮಾನಿಗಳು ಸೆಲ್ಫಿಗಾಗಿ ವಿನಂತಿಸಿಕೊಂಡಾಗ, ಅವರು ಅತ್ಯಂತ ವಿನಮ್ರತೆಯಿಂದ ಒಪ್ಪಿಕೊಂಡರು. ಸೆಲ್ಫಿ ತೆಗೆದುಕೊಳ್ಳಲು ಆಕಾಶ್ ಅಂಬಾನಿ ಅವರು ತಮ್ಮತ್ತ ಮೊಬೈಲ್ ನೀಡುವಂತೆ ಅಭಿಮಾನಿಗಳಿಗೆ ಸನ್ನೆ ಮಾಡಿದರು. ಆದರೆ, ಈ ವೇಳೆ ಅತಿಯಾದ ಉತ್ಸಾಹ ಅಥವಾ ಪಂದ್ಯದ ಸೋಲಿನ ಆಕ್ರೋಶದಲ್ಲಿದ್ದ ಅಭಿಮಾನಿಗಳು ಒಮ್ಮಿಂದೊಮ್ಮೆಗೆ ತಮ್ಮ ಮೊಬೈಲ್ ಫೋನ್‌ಗಳನ್ನು ಅವರತ್ತ ಎಸೆದಿದ್ದಾರೆ. ಇದರಿಂದ ಸಣ್ಣದಾಗಿ ಆಘಾತಕ್ಕೊಳಗಾದ ಆಕಾಶ್ ಅಂಬಾನಿ "ಏನು ಮಾಡುತ್ತಿದ್ದೀರಾ?" (ಕ್ಯಾ ಕರ್ ರಹೇ ಹೋ?) ಎಂದು ಅಸಮಾಧಾನ ಹೊರಹಾಕಿದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಆಕಾಶ್ ಅಂಬಾನಿ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೆಲ್ಫಿ ಕೇಳಿ ಈ ರೀತಿ ಮೊಬೈಲ್ ಎಸೆಯುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿರುವ ಅಭಿಮಾನಿಗಳು, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆದರೆ, ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಪ್ರಸ್ತುತ ಪಂದ್ಯದ್ದಲ್ಲ, ಬದಲಿಗೆ ಆಕಾಶ್ ಅಂಬಾನಿ ಅವರು ಅಭಿಮಾನಿಗಳ ಫೋನ್ ಪಡೆದು ಸೆಲ್ಫಿ ಕ್ಲಿಕ್ಕಿಸಿಕೊಟ್ಟ ಹಳೆಯ ಐಪಿಎಲ್ ಸೀಸನ್‌ನ ವಿಡಿಯೋವನ್ನು ಈಗ ತಪ್ಪು ಸಂದರ್ಭದೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದೂ ಕೆಲವರು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net