ಕೆಣಕಿದ ಕ್ಲಾಸೆನ್ ಕೆರಳಿ ಕೆಂಡವಾದ ಶಾಂತ ಸ್ವಭಾವದ ಸಂಜು: ವೈರಲ್​ ವಿಡಿಯೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​! Sanju Samson

ಕೆಣಕಿದ ಕ್ಲಾಸೆನ್ ಕೆರಳಿ ಕೆಂಡವಾದ ಶಾಂತ ಸ್ವಭಾವದ ಸಂಜು: ವೈರಲ್​ ವಿಡಿಯೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​! Sanju Samson
ಕೆಣಕಿದ ಕ್ಲಾಸೆನ್ ಕೆರಳಿ ಕೆಂಡವಾದ ಶಾಂತ ಸ್ವಭಾವದ ಸಂಜು: ವೈರಲ್​ ವಿಡಿಯೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​! Sanju Samson
Published on

ಪ್ರಮುಖ ಮುಖ್ಯಾಂಶಗಳು

  • ಸದಾ ಶಾಂತವಾಗಿರುತ್ತಿದ್ದ ಸಂಜು, ಕ್ಲಾಸೆನ್ ಮಾತಿಗೆ ಸಿಟ್ಟಾಗಿ ಮೈದಾನದಲ್ಲೇ ವಾಗ್ವಾದಕ್ಕಿಳಿದಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ
  • ಭರ್ಜರಿ ಫಾರ್ಮ್‌ನಲ್ಲಿದ್ದ ಕ್ಲಾಸೆನ್ ಅವರನ್ನು ಸಂಜು ಸ್ಯಾಮ್ಸನ್ ಧೋನಿ ಶೈಲಿಯಲ್ಲಿ ಚುರುಕಾಗಿ ಔಟ್ ಮಾಡಿದರು
  • ಔಟ್ ಆದ ಸಿಟ್ಟಿನಲ್ಲಿ ಕ್ಲಾಸೆನ್-ಸಂಜು ನಡುವೆ ತೀವ್ರ ಚಕಮಕಿ ನಡೆದಾಗ ಶಿವಂ ದುಬೆ ಹಾಗೂ ಅಂಪೈರ್ ಪರಿಸ್ಥಿತಿ ತಿಳಿಗೊಳಿಸಿದರು
  • ಧೋನಿ ಶೈಲಿಯ ಈ ಸ್ಟಂಪಿಂಗ್ ಹಳೇ ದಿನಗಳನ್ನು ನೆನಪಿಸಿದ್ದು, ಖುದ್ದು ಧೋನಿ ಡ್ರೆಸ್ಸಿಂಗ್ ರೂಮ್‌ನಿಂದಲೇ ಸಾಕ್ಷಿಯಾದರು
Sanju Samson : ನಿನ್ನೆ (ಮೇ 18) ಚೆನ್ನೈ ಸೂಪರ್ ಕಿಂಗ್ಸ್ ( CSK ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ( SRH ) ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ನಾಟಕೀಯ ಘಟನೆಗಳು ಮತ್ತು ಸಂಜು ಸ್ಯಾಮ್ಸನ್​ ಅವರ ಕೋಪದ ನಡವಳಿಕೆಯನ್ನು ಕಂಡು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.
ಎದುರಾಳಿ ತಂಡದ ಹೆನ್ರಿಕ್​ ಕ್ಲಾಸೆನ್ ಅವರನ್ನು ಧೋನಿ ರೀತಿ ಮಿಂಚಿನ ವೇಗದಲ್ಲಿ ಸಂಜು ಸ್ಯಾಮ್ಸನ್​ ಸ್ಟಂಪ್ ಔಟ್​ ಮಾಡಿದ ಬಳಿಕ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಯಾವಾಗಲೂ ಮೈದಾನದಲ್ಲಿ ಅತ್ಯಂತ ಶಾಂತವಾಗಿ ಕಾಣಿಸುತ್ತಿದ್ದ ಸಂಜು, ನಿನ್ನೆ ಕ್ಲಾಸೆನ್​ ಅವರ ಮಾತಿನಿಂದ ಆಕ್ರೋಶಗೊಂಡರು. ಮೈದಾದನಲ್ಲೇ ಇಬ್ಬರ ನಡುವೆ ನಡೆದ ವಾಗ್ವಾದ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
181 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಹೈದರಾಬಾದ್ ತಂಡದ ಪರವಾಗಿ ಹೆನ್ರಿಕ್​ ಕ್ಲಾಸೆನ್ ಕೇವಲ 26 ಎಸೆತಗಳಲ್ಲಿ 47 ರನ್ ಗಳಿಸಿ ಭರ್ಜರಿ ಫಾರ್ಮ್‌ನಲ್ಲಿದ್ದರು. ಆದರೆ, ಪಂದ್ಯದ 15ನೇ ಓವರ್‌ನಲ್ಲಿ ನೂರ್ ಅಹಮದ್ ಎಸೆದ ಚಾಣಾಕ್ಷ ಬಾಲ್‌ನಲ್ಲಿ ಸಂಜು ಸ್ಯಾಮ್ಸನ್ ಅವರು ಕ್ಲಾಸೆನ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡುವ ಮೂಲಕ ಔಟ್ ಮಾಡಿದರು. ಸ್ಟಂಪಿಂಗ್ ವೇಳೆ ಕ್ಲಾಸೆನ್ ಅವರ ಕಾಲು ಕ್ಷಣಕಾಲ ಕ್ರೀಸ್‌ನಿಂದ ಮೇಲಕ್ಕೆ ಎದ್ದಿದ್ದು ಆರಂಭದಲ್ಲಿ ಗೊಂದಲ ಮೂಡಿಸಿದರೂ, ಥರ್ಡ್ ಅಂಪೈರ್ ರಿಪ್ಲೇ ಪರಿಶೀಲಿಸಿ ಔಟ್ ಎಂದು ಖಚಿತಪಡಿಸಿದರು.
ಇದಾದ ಬಳಿಕ ಚೆನ್ನೈ ತಂಡದ ಆಟಗಾರರು ಸಂಭ್ರಮಿಸುತ್ತಿದ್ದಾಗ, ಔಟ್ ಆದ ಕೋಪದಲ್ಲಿದ್ದ ಕ್ಲಾಸೆನ್, ಸಂಜು ಸ್ಯಾಮ್ಸನ್ ಕಡೆ ನೋಡಿ ಏನೋ ಹೇಳಿದರು. ಇದರಿಂದ ಸಂಜು ಕೂಡ ಆಕ್ರೋಶಗೊಂಡರು. ಈ ವೇಳೆ ಮೈದಾನದಲ್ಲೇ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ವೈರಲ್​ ಆಗುತ್ತಿರುವ ವಿಡಿಯೋ ದೃಶ್ಯಾವಳಿಗಳಲ್ಲಿ ಕ್ಲಾಸೆನ್ ಅವರು ಸಂಜು ವಿರುದ್ಧ ಆಕ್ರೋಶದಿಂದ ಮಾತನಾಡುತ್ತಿರುವುದು ಮತ್ತು ಅದಕ್ಕೆ ಸಂಜು ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ ಮಾತಿನ ಚಕಮಕಿಗೆ ಇಳಿದಿರುವುದು ಕಂಡುಬಂದಿದೆ.
ತಕ್ಷಣವೇ ಮಧ್ಯಪ್ರವೇಶಿಸಿದ ಚೆನ್ನೈ ಆಟಗಾರ ಶಿವಂ ದುಬೆ ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರು. ಆನಂತರ ಅಂಪೈರ್ ಸಂಜು ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಬಳಿಕ ಪಂದ್ಯವು ಮುಂದುವರೆಯಿತು.
ಮೈದಾನದಲ್ಲಿ ಇಷ್ಟೆಲ್ಲಾ ಗದ್ದಲ ನಡೆದಾಗಲೂ, ಸಂಜು ಅವರ ಆ ಮಿಂಚಿನ ಸ್ಟಂಪಿಂಗ್ ಕಂಡು ಅಭಿಮಾನಿಗಳು ಮಾತ್ರ ಪೂರ್ಣ ಫಿದಾ ಆಗಿದ್ದಾರೆ. ಸಂಜು ಸ್ಯಾಮ್ಸನ್ ಅವರ ಈ ಚುರುಕಿನ ಆಟವು ತಮಗೆ ಧೋನಿಯವರ ಹಳೆಯ ಮಿಂಚಿನ ವೇಗದ ಸ್ಟಂಪಿಂಗ್ ದಿನಗಳನ್ನು ನೆನಪಿಸುವಂತೆ ಮಾಡಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವೆಂದರೆ, ಚೆಪಾಕ್ ಮೈದಾನದಲ್ಲಿ ನಡೆದ ಈ ರೋಮಾಂಚಕ ಕ್ಷಣಗಳಿಗೆ ಖುದ್ದು ಎಂ.ಎಸ್. ಧೋನಿ ಅವರೂ ಸಹ ಡ್ರೆಸ್ಸಿಂಗ್ ರೂಮ್‌ನಲ್ಲೇ ಇದ್ದು ಸಾಕ್ಷಿಯಾದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net