ಕಳೆದ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ತೊರೆದು, ರೋಹಿತ್ ಶರ್ಮಾ ಜಾಗಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಬಂದಾಗಿನಿಂದಲೂ ವಿವಾದಗಳು ಅವರ ಬೆನ್ನ ಬಿಟ್ಟಿಲ್ಲ. ಪ್ರಸ್ತುತ ಮುಂಬೈ ಫ್ರಾಂಚೈಸಿ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಕ್ಯಾಂಪ್‌ನಿಂದ ಹೊರನಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಸಿಎಸ್‌ಕೆ ಅವರನ್ನು ಸೆಳೆದುಕೊಳ್ಳಲು ಭಾರಿ ಆಸಕ್ತಿ ತೋರಿದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.