Maharaja Trophy: ಪದಾರ್ಪಣೆಯ ಆವೃತ್ತಿಯಲ್ಲೇ ಶಿವಮೊಗ್ಗ ಯೋಧಾಸ್ ತಂಡ ಚಾಂಪಿಯನ್, ದ್ರಾವಿಡ್ ಪುತ್ರನ ಆಟ ವ್ಯರ್ಥ!

ಪದಾರ್ಪಣೆಯ ಆವೃತ್ತಿಯಲ್ಲೇ ಶಿವಮೊಗ್ಗ ಯೋಧಾಸ್ ತಂಡ ಚಾಂಪಿಯನ್, ದ್ರಾವಿಡ್ ಪುತ್ರನ ಆಟ ವ್ಯರ್ಥ!
ಪದಾರ್ಪಣೆಯ ಆವೃತ್ತಿಯಲ್ಲೇ ಶಿವಮೊಗ್ಗ ಯೋಧಾಸ್ ತಂಡ ಚಾಂಪಿಯನ್, ದ್ರಾವಿಡ್ ಪುತ್ರನ ಆಟ ವ್ಯರ್ಥ!
Published on
ಬೆಂಗಳೂರು: ಶಿವಮೊಗ್ಗ ಯೋಧಾಸ್ ತಂಡ ಪದಾರ್ಪಣೆಯ ಆವೃತ್ತಿಯಲ್ಲೇ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು. ನಾಯಕ ಲವನೀತ್ ಸಿಸೋಡಿಯಾ (87 ರನ್, 45 ಎಸೆತ, 9 ಬೌಂಡರಿ, 4 ಸಿಕ್ಸರ್) ಅಮೋಘ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಯೋಧಾಸ್ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಎದುರು 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಟೀಮ್ ಇಂಡಿಯಾ ಮಾಜಿ ನಾಯಕ-ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ (37 ರನ್, 37 ಎಸೆತ, 4 ಬೌಂಡರಿ, 1 ಸಿಕ್ಸರ್ ಹಾಗೂ 36ಕ್ಕೆ 4 ವಿಕೆಟ್) ಆಲ್ರೌಂಡ್ ಆಟದ ನಡುವೆಯೂ ಬೆಂಗಳೂರು ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರು ಬ್ಲಾಸ್ಟರ್ ತಂಡ 36 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಸಮಿತ್ ದ್ರಾವಿಡ್ ಹಾಗೂ ನಾಯಕ ಶುಭಾಂಗ್ ಹೆಗ್ಡೆ (31*) ಜತೆಯಾಟದಿಂದ ಚೇತರಿಸಿಕೊಂಡ ಬೆಂಗಳೂರು ಬ್ಲಾಸ್ಟರ್ಸ್‌, ಸ್ಲಾಗ್ ಓವರ್‌ಗಳಲ್ಲಿ ವಹಿದ್ ಫೈಜನ್ ಖಾನ್ (29) ಮತ್ತು ರೋಹನ್ ನವೀನ್ (25*) ಬಿರುಸಿನಾಟದ ನೆರವಿನಿಂದ 8 ವಿಕೆಟ್‌ಗೆ 185 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಪ್ರತಿಯಾಗಿ ಆರಂಭಿಕ ಆಘಾತದ ನಡುವೆಯೂ ಲವನೀತ್ ಸಿಸೋಡಿಯಾ ಹಾಗೂ ಕೆವಿ ಅನೀಶ್ (38 ರನ್, 19 ಎಸೆತ, 4 ಸಿಕ್ಸರ್) ಜವಾಬ್ದಾರಿಯುತ ಆಟದ ನೆರವಿನಿಂದ ಶಿವಮೊಗ್ಗ ಯೋಧಾಸ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಬೆಂಗಳೂರು ಬ್ಲಾಸ್ಟರ್ಸ್‌: 8 ವಿಕೆಟ್‌ಗೆ 185 (ಭುವನ್ ರಾಜು 23, ರೋಹನ್ ಪಾಟೀಲ್ 11, ಕೆಎಲ್ ಶ್ರೀಜಿತ್ 0, ಸಮಿತ್ ದ್ರಾವಿಡ್ 37, ಶುಭಾಂಗ್ ಹೆಗ್ಡೆ 31*, ಪ್ರವೀಣ್ ದುಬೆ 12, ಶಿವರಾಜ್ ಎಸ್. 11, ವಹಿದ್ ಫೈಜನ್ 29,ರೋಹನ್ ಎನ್. 25*, ಧನುಷ್ ಗೌಡ 38ಕ್ಕೆ 2, ಜಿ.ನವೀನ್ 16ಕ್ಕೆ 1, ಯಶೋವರ್ಧನ್ 33ಕ್ಕೆ 1).
ಶಿವಮೊಗ್ಗ ಯೋಧಾಸ್: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 186 (ಲವನೀತ್ 87, ತುಷಾರ್ 0, ಆದರ್ಶ್ 8, ಜಿ.ನವೀನ್ 24, ಕೆವಿ ಅನೀಶ್ 38, ಹರ್ಷಿಲ್ ಧರ್ಮಾನಿ 17, ಯಶೋವರ್ಧನ್ 2*, ಸಮಿತ್ ದ್ರಾವಿಡ್
36ಕ್ಕೆ 4, ನಿಶ್ಚಿತ್ ರಾವ್ 29ಕ್ಕೆ 1).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net