ಇತ್ತೀಚೆಗೆ 'ಹ್ಯೂಮನ್ಸ್ ಆಫ್ ಬಾಂಬೆ' ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಲಲಿತ್ ಮೋದಿ, ನಾನೇನಾದರೂ ಇಂದು ಅಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ, ಆ ಕ್ರೀಡಾಂಗಣವನ್ನು ಕೆಡವಿ ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸುತ್ತಿದ್ದೆ. ಅತ್ಯಾಧುನಿಕ ಎಸ್ಕಲೇಟರ್‌ಗಳು, ಅಡುಗೆಮನೆಗಳು ಮತ್ತು ರೆಸ್ಟೋರೆಂಟ್‌ಗಳನ್ನು ಅಳವಡಿಸಿ, ವರ್ಷದ 365 ದಿನಗಳೂ ಜನರು ಭೇಟಿ ನೀಡುವಂತಹ ಸುಂದರ ಪ್ರವಾಸಿ ತಾಣವನ್ನಾಗಿ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ