ಡಬ್ಲ್ಯುಪಿಎಲ್​ ಹರಾಜಿಗೆ ಕರ್ನಾಟಕದ 10 ಆಟಗಾರ್ತಿಯರು

ಡಬ್ಲ್ಯುಪಿಎಲ್​ ಹರಾಜಿಗೆ ಕರ್ನಾಟಕದ 10 ಆಟಗಾರ್ತಿಯರು
ಡಬ್ಲ್ಯುಪಿಎಲ್​ ಹರಾಜಿಗೆ ಕರ್ನಾಟಕದ 10 ಆಟಗಾರ್ತಿಯರು
Published on
ಬೆಂಗಳೂರು: ಮುಂದಿನ ವರ್ಷದ 4ನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ಗೆ (WPL) ಪೂರ್ವಭಾವಿಯಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನವೆಂಬರ್​ 27ರಂದು ನವದೆಹಲಿಯಲ್ಲಿ ನಡೆಯಲಿದ್ದು, ಇದರಲ್ಲಿ ಕರ್ನಾಟಕದ 10 ಆಟಗಾರ್ತಿಯರೂ ಭಾಗವಹಿಸಲಿದ್ದಾರೆ.

ಈ ಪೈಕಿ ಅನುಭವಿ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​ ಗರಿಷ್ಠ 40 ಲಕ್ಷ ರೂ. ಮೂಲಬೆಲೆ ಹೊಂದಿದ್ದರೆ, ಶುಭಾ ಸತೀಶ್​ ಮತ್ತು ಮೋನಿಕಾ ಪಟೇಲ್​ ತಲಾ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಉಳಿದಂತೆ ವೃಂದಾ ದಿನೇಶ್​, ಪ್ರತ್ಯುಷಾ ಕುಮಾರ್​, ಸಹನಾ ಪವಾರ್​, ಪ್ರಿಯಾ ಚವನ್​, ಬಿ.ಜಿ. ತೇಜಸ್ವಿನಿ, ಮಿಥಿಲಾ ವಿನೋದ್​, ಕಾಶ್ವಿ ಕಂಡಿಕುಪ್ಪ ತಲಾ 10 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.

ಇಬ್ಬರು ಕನ್ನಡತಿಯರಾದ ಶ್ರೇಯಾಂಕಾ ಪಾಟೀಲ್​ (ಆರ್​ಸಿಬಿ) ಮತ್ತು ನಿಕಿ ಪ್ರಸಾದ್​ (ಡೆಲ್ಲಿ) ಈಗಾಗಲೆ ರಿಟೇನ್​ ಆಗಿದ್ದಾರೆ. ಹರಾಜಿನಲ್ಲಿ 194 ಭಾರತೀಯರ ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದು, 5 ತಂಡಗಳು ಗರಿಷ್ಠ 73 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. cricket.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net