ಗ್ರೀನ್ಗಾಗಿ ಮುಂಬೈ ಇಂಡಿಯನ್ಸ್ ತಂಡವು 2 ಕೋಟಿ ರೂಪಾಯಿಗಳಿಂದ ಬಿಡ್ಡಿಂಗ್ ಆರಂಭಿಸಿತು. ತಮಾಷೆಯ ಸಂಗತಿ ಏನೆಂದರೆ, ಮುಂಬೈ ಇಂಡಿಯನ್ಸ್ ತಂಡದ ಪರ್ಸ್ನಲ್ಲಿ ಕೇವಲ 2.75 ಕೋಟಿ ರೂಪಾಯಿ ಮಾತ್ರ ಇತ್ತು. ಹೀಗಾಗಿ ಗ್ರೀನ್, ಮುಂಬೈ ಇಂಡಿಯನ್ಸ್ ತೆಕ್ಕೆಯಿಂದ ಜಾರಿದರು. ಬಳಿಕ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡಗಳು ಬಿಡ್ಡಿಂಗ್ ಪೈಪೋಟಿ ನಡೆಸಿದವು. ಈ ಹಂತದಲ್ಲಿ ಈ ಎರಡು ತಂಡಗಳನ್ನು ಬಿಟ್ಟರೆ ಬೇರೆ ಯಾವ ತಂಡವು ಗ್ರೀನ್ ಬಗ್ಗೆ ಆಸಕ್ತಿ ತೊರಲಿಲ್ಲ. 2 ಕೋಟಿಯಿಂದ ತಕ್ಷಣ 7 ಕೋಟಿ ಬಿಡ್ಡಿಂಗ್ ಮೊತ್ತ ಏರಿತು. ಅಲ್ಲದೆ, ಈ ಹರಾಜಿನಲ್ಲಿ 10+ ಕೋಟಿ ಮೊತ್ತ ದಾಟಿದ ಮೊದಲ ಆಟಗಾರ ಎನಿಸಿಕೊಂಡರು.