19ನೇ ಆವೃತ್ತಿಯ IPL ಆರಂಭದ ದಿನಾಂಕದಲ್ಲಿ ಬದಲಾವಣೆ... ಎರಡು ದಿನ ವಿಳಂಬ, ಯಾವಾಗ ಶುರು? IPL 2026

19ನೇ ಆವೃತ್ತಿಯ IPL ಆರಂಭದ ದಿನಾಂಕದಲ್ಲಿ ಬದಲಾವಣೆ... ಎರಡು ದಿನ ವಿಳಂಬ, ಯಾವಾಗ ಶುರು? IPL 2026
19ನೇ ಆವೃತ್ತಿಯ IPL ಆರಂಭದ ದಿನಾಂಕದಲ್ಲಿ ಬದಲಾವಣೆ... ಎರಡು ದಿನ ವಿಳಂಬ, ಯಾವಾಗ ಶುರು? IPL 2026
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಟಿ20 ವಿಶ್ವಕಪ್ ಮುಗಿದಿದ್ದು, ಟೀಮ್​ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ
  • ಮೂರನೇ ಬಾರಿಗೆ ಭಾರತ ಚುಟುಕು ವಿಶ್ವಕಪ್ ಗೆದ್ದಿದ್ದು, ಇಡೀ ದೇಶವೇ ಸಂಭ್ರಮಿಸುತ್ತಿದೆ
  • ಇದೀಗ ಕ್ರೀಡಾಭಿಮಾನಿಗಳ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ ಮೇಲೆ ಬಿದ್ದಿದೆ
IPL 2026 : ಪ್ರಸ್ತುತ ಟಿ20 ವಿಶ್ವಕಪ್ ಮುಗಿದಿದ್ದು, ಟೀಮ್​ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೂರನೇ ಬಾರಿಗೆ ಭಾರತ ಚುಟುಕು ವಿಶ್ವಕಪ್ ಗೆದ್ದಿದ್ದು, ಇಡೀ ದೇಶವೇ ಸಂಭ್ರಮಿಸುತ್ತಿದೆ. ವಿಶ್ವಕಪ್​ ಏನೋ ಮುಗಿಯಿತು ಇದೀಗ ಕ್ರೀಡಾಭಿಮಾನಿಗಳ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ ಮೇಲೆ ಬಿದ್ದಿದೆ. ಅಂದಹಾಗೆ, ಐಪಿಎಲ್​-2026ರ ಆರಂಭದ ದಿನಾಂಕ ಬದಲಾಗಿದ್ದು, ಈ ಮೆಗಾ ಟೂರ್ನಮೆಂಟ್ ಮಾರ್ಚ್ 28 ರಿಂದ ಆರಂಭವಾಗಲಿದೆ.
ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಈ ವಿಷಯವನ್ನು ಪ್ರಕಟಿಸಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೂ ಮುನ್ನವೇ ವೇಳಾಪಟ್ಟಿಯನ್ನು ಘೋಷಿಸಲಾಯಿತು.
ಐಪಿಎಲ್-2026 ಮೂಲತಃ ಮಾರ್ಚ್ 26 ರಿಂದ ಪ್ರಾರಂಭವಾಗಬೇಕಿತ್ತು. ಈ ಸೀಸನ್​ಗೂ ಮೊದಲು ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಸ್ವಲ್ಪ ಸಮಯ ನೀಡಲು ಐಪಿಎಲ್ ಆಡಳಿತ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತೋರುತ್ತದೆ. ಇದೇ ಸಂದರ್ಭದಲ್ಲಿ ಆರಂಭದ ದಿನಾಂಕವನ್ನು ಸ್ಪಷ್ಟಪಡಿಸಲಾಗಿದ್ದರೂ, ಬಿಸಿಸಿಐ ಮಾತ್ರ ಐಪಿಎಲ್ 2026ರ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಬೆಂಗಳೂರಿನಲ್ಲಿ 5 ಪಂದ್ಯ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂತೋಷನ್ ಮೆನನ್ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್ 2026ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್‌ನ ಐದು ತವರು ಪಂದ್ಯಗಳನ್ನು ಆಯೋಜಿಸಲಿದೆ ಎಂದು ಹೇಳಿದರು. ಟೂರ್ನಮೆಂಟ್‌ನ ಪ್ಲೇಆಫ್ ಪಂದ್ಯಗಳಲ್ಲಿ ಒಂದನ್ನು ಮತ್ತು ಐಪಿಎಲ್ 2026ರ ಫೈನಲ್ ಅನ್ನು ಸಹ ಆಯೋಜಿಸಲಿದೆ ಎಂದು ಮೆನನ್​ ಅವರು ಬಹಿರಂಗಪಡಿಸಿದರು.
ಆರ್‌ಸಿಬಿ, ಐಪಿಎಲ್ 2026 ರ ಋತುವಿನ ಉಳಿದ ಎರಡು ತವರು ಪಂದ್ಯಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net