ಜಿಯೋಹಾಟ್‌ಸ್ಟಾರ್‌ನ 'ಚಾಂಪಿಯನ್ಸ್ ವಾಲಿ ಕಾಮೆಂಟರಿ' ಶೋನಲ್ಲಿ ಮಾತನಾಡಿದ ಜಿಯೋಸ್ಟಾರ್ ತಜ್ಞ ಹಾಗೂ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, 'ಭಯವಿಲ್ಲದ ಅಸಾಧಾರಣ ಪ್ರತಿಭೆ' ವೈಭವ್ ಸೂರ್ಯವಂಶಿಗೆ ಬೌಲಿಂಗ್ ಮಾಡುವ ಸವಾಲಿನ ಬಗ್ಗೆ ಚರ್ಚಿಸಿದ್ದಾರೆ. ವೈಭವ್ ಸೂರ್ಯವಂಶಿ ವಿರುದ್ಧ ಬೌಲಿಂಗ್ ಮಾಡುವಾಗ, ಹೇಗಾದರೂ ಮಾಡಿ ಅವರ ವಿಕೆಟ್ ಪಡೆಯುವುದೇ ನನ್ನ ಯೋಜನೆಯಾಗಿರುತ್ತದೆ. ಆದರೆ, ಅವರು ಯಾವ ರೀತಿಯ ಫಾರ್ಮ್‌ನಲ್ಲಿದ್ದಾರೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ಚೆಂಡನ್ನು ಚೆನ್ನಾಗಿ ಸ್ಪಿನ್ ಮಾಡಿ, ಅವರ ಹಿಟ್ಟಿಂಗ್ ಆರ್ಕ್‌ನಿಂದ (ಬ್ಯಾಟ್ ಬೀಸುವ ವ್ಯಾಪ್ತಿ) ದೂರ ಇಡುವುದು ನನ್ನ ಪ್ಲಾನ್ ಆಗಿರುತ್ತದೆ. ಅವರು ಕ್ರೀಸ್ ಬಿಟ್ಟು ಮುನ್ನುಗ್ಗಿ ಬಂದು ನನಗೆ ಸಿಕ್ಸರ್ ಬಾರಿಸಲು ಯತ್ನಿಸಿದರೂ ಪರವಾಗಿಲ್ಲ, ಆದರೆ ಕ್ರೀಸ್‌ನಲ್ಲಿ ಒಂದೇ ಕಡೆ ನಿಂತು ಸುಲಭವಾಗಿ ಶಾಟ್‌ಗಳನ್ನು ಆಡಲು ನಾನು ಬಿಡುವುದಿಲ್ಲ" ಎಂದು ಹರ್ಭಜನ್ ತಮ್ಮ ಬೌಲಿಂಗ್ ತಂತ್ರವನ್ನು ಹಂಚಿಕೊಂಡಿದ್ದಾರೆ.