ಐಪಿಎಲ್​ ಮಿನಿ ಹರಾಜು: ಯಾವ ತಂಡ ಬಲಿಷ್ಠ? ಇಲ್ಲಿದೆ ಎಲ್ಲ 10 ತಂಡಗಳ ಸಂಪೂರ್ಣ ವಿವರ...IPL 2026

ಐಪಿಎಲ್​ ಮಿನಿ ಹರಾಜು-2026
ಐಪಿಎಲ್​ ಮಿನಿ ಹರಾಜು-2026
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾಭಿಮಾನಿಗಳ ಚಿತ್ತ ಇಂಡಿಯನ್​ ಪ್ರೀಮಿಯರ್​ ಲೀಗ್​-2026ರ 19ನೇ ಆವೃತ್ತಿಯತ್ತ ನೆಟ್ಟಿದೆ
  • ನಿನ್ನೆಯಷ್ಟೇ (ಡಿ.16) ಅಬುಧಾಬಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಪೂರ್ಣಗೊಂಡಿತು
  • 10 ಫ್ರಾಂಚೈಸಿಗಳು 215.45 ಕೋಟಿ ರೂ.ಗಳನ್ನು ಖರ್ಚು ಮಾಡಿ, ಒಟ್ಟು 77 ಆಟಗಾರರನ್ನು ಖರೀದಿಸಿವೆ
  • ಎಲ್ಲ ಹತ್ತು ತಂಡಗಳ ಆಟಗಾರರ ಸಂಪೂರ್ಣ ವಿವರಗಳು ಇಲ್ಲಿದೆ
IPL 2026: ಇದೀಗ ಕ್ರೀಡಾಭಿಮಾನಿಗಳ ಚಿತ್ತ ಇಂಡಿಯನ್​ ಪ್ರೀಮಿಯರ್​ ಲೀಗ್​-2026 19ನೇ ಆವೃತ್ತಿಯತ್ತ ನೆಟ್ಟಿದೆ. ನಿನ್ನೆಯಷ್ಟೇ (ಡಿ.16) ಅಬುಧಾಬಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಪೂರ್ಣಗೊಂಡಿತು. ಎಲ್ಲ 10 ಫ್ರಾಂಚೈಸಿಗಳು ಒಟ್ಟು 215.45 ಕೋಟಿ ರೂ.ಗಳನ್ನು ಖರ್ಚು ಮಾಡಿ, ಒಟ್ಟು 77 ಆಟಗಾರರನ್ನು ಖರೀದಿಸಿವೆ. ಈ ಪೈಕಿ 29 ವಿದೇಶಿ ಆಟಗಾರರು. ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಹಾಗೂ ತಮ್ಮದೇಯಾದ ತಂತ್ರಗಳನ್ನು ರಚಿಸಿಕೊಂಡು ಹರಾಜಿನಲ್ಲಿ ಪಾಲ್ಗೊಂಡ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿವೆ. ಹರಾಜು ಪ್ರಕ್ರಿಯೆ ಮುಗಿದ ನಂತರ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ಕಿಂಗ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ಸೇರಿದಂತೆ ಎಲ್ಲ ಹತ್ತು ತಂಡಗಳ ಆಟಗಾರರ ಸಂಪೂರ್ಣ ವಿವರಗಳನ್ನುಗಳನ್ನು ನಾವೀಗ ತಿಳಿದುಕೊಳ್ಳೋಣ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ರೀಟೆನ್​ ಆಟಗಾರರು: ವಿರಾಟ್​ ಕೊಹ್ಲಿ, ಅಭಿನಂದನ್ ಸಿಂಗ್, ಭುವನೇಶ್ವರ್ ಕುಮಾರ್, ದೇವದತ್ ಪಡಿಕ್ಕಲ್, ಜೋಕೋಬ್​ ಬೆಥೆಲ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ, ನುವಾನ್ ತುಷಾರ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ರಸಿಖ್ ದಾರ್ ಸಲಾಮ್, ರೊಮಾರಿಯೋ ಶೆಫರ್ಡ್, ಸುಯಾಶ್ ಶರ್ಮಾ, ಟಿಮ್​ ಡೇವಿಡ್ ಹಾಗೂ ಯಶ್​ ದಯಾಳ್​.
ಖರೀದಿಸಿದ ಆಟಗಾರರು: ವೆಂಕಟೇಶ್ ಅಯ್ಯರ್ (7 ಕೋಟಿ ರೂ.), ಜೇಕಬ್ ಡಫೀ (2 ಕೋಟಿ ರೂ.), ಸಾತ್ವಿಕ್ ದೇಸ್ವಾಲ್ (30 ಲಕ್ಷ ರೂ.), ಮಂಗೇಶ್ ಯಾದವ್ ( 5.2 ಕೋಟಿ ರೂ.), ಜೋರ್ಡಾನ್ ಕಾಕ್ಸ್ (75 ಲಕ್ಷ ರೂ.), ವಿಕ್ಕಿ ಓಸ್ತ್ವಾಲ್ ( 30 ಲಕ್ಷ ರೂ. ), ವಿಹಾನ್ ಮಲ್ಹೋತ್ರಾ (30 ಲಕ್ಷ ರೂ.) ಹಾಗೂ ಕನಿಷ್ಕ್ ಚೌಹಾಣ್ (30 ಲಕ್ಷ ರೂ.).

ಚೆನ್ನೈ ಸೂಪರ್​ ಕಿಂಗ್ಸ್​

ರೀಟೆನ್​ ಆಟಗಾರರು: ಅಂಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್, ಜೇಮಿ ಓವರ್‌ಟನ್, ಎಂಎಸ್ ಧೋನಿ, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ನೂರ್ ಅಹ್ಮದ್, ರಾಮಕೃಷ್ಣ ಘೋಷ್, ಸಂಜು ಸ್ಯಾಮ್ಸನ್ (ವ್ಯಾಪಾರ), ರುತುರಾಜ್ ಗಾಯಕ್ವಾಡ್​, ಶಿವಂ ದುಬೆ, ಶ್ರೇಯಸ್ ಗೋಪಾಲ್, ಖಲೀಲ್ ಅಹ್ಮದ್ ಹಾಗೂ ಊರ್ವಿ ಪಟೇಲ್​.
ಖರೀದಿಸಿದ ಆಟಗಾರರು: ಕಾರ್ತಿಕ್ ಶರ್ಮಾ (14.20 ಕೋಟಿ ರೂ.), ಪ್ರಶಾಂತ್ ವೀರ್ (14.20 ಕೋಟಿ ರೂ.), ಅಕೀಲ್ ಹೊಸೈನ್ (2 ಕೋಟಿ ರೂ.), ಮ್ಯಾಥ್ಯೂ ಶಾರ್ಟ್ (1.5 ಕೋಟಿ ರೂ.), ಅಮನ್ ಖಾನ್ (ರೂ. 40 ಲಕ್ಷ), ಸರ್ಫರಾಜ್ ಖಾನ್ (ರೂ. 75 ಲಕ್ಷ), ರಾಹುಲ್ ಚಹರ್​ (5.2 ಕೋಟಿ) ಹಾಗೂ ಜಾಕ್ ಫೌಲ್ಕ್ಸ್ (ರೂ. 75 ಲಕ್ಷ).

ಲಖನೌ ಸೂಪರ್​ ಜೈಂಟ್ಸ್​

ರೀಟೆನ್​ ಆಟಗಾರರು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ಆಕಾಶ್ ಸಿಂಗ್, ಅರ್ಜುನ್ ತೆಂಡೂಲ್ಕರ್ (ಟ್ರೇಡ್​), ಅರ್ಶಿನ್ ಕುಲಕರ್ಣಿ, ಅವೇಶ್ ಖಾನ್, ಆಯುಷ್ ಬಡೋನಿ, ದಿಗ್ವೇಶ್ ರಾಠಿ, ಹಿಮ್ಮತ್ ಸಿಂಗ್, ಮಣಿಮಾರನ್ ಸಿದ್ಧಾರ್ಥ್, ಮ್ಯಾಥ್ಯೂ ಬ್ರಿಟ್ಜ್‌ಕೆ, ಮಯಾಂಕ್ ಯಾದವ್, ಮೊಹಮ್ಮದ್ ಶಮಿ (ಟ್ರೇಡ್​), ಮಿಚೆಲ್ ಮಾರ್ಶ್, ರಿಷಭ್ ಪಂತ್, ಶಹಬಾಜ್ ಅಹ್ಮದ್, ಪ್ರಿನ್ಸ್​ ಯಾದವ್​ ಹಾಗೂ ಮೊಸ್ಸಿನ್​ ಖಾನ್​.
ಖರೀದಿಸಿದ ಆಟಗಾರರು: ಜೋಶ್ ಇಂಗ್ಲಿಸ್ (8.60 ಕೋಟಿ ರೂ.), ಮುಕುಲ್ ಚೌಧರಿ (2.60 ಕೋಟಿ ರೂ.), ಅಕ್ಷತ್ ರಘುವಂಶಿ (30 ಲಕ್ಷ), ಅನ್ರಿಚ್ ನೋಕಿಯಾ (2 ಕೋಟಿ), ವನಿಂದು ಹಸರಂಗ (2 ಕೋಟಿ) ಹಾಗೂ ನಮನ್ ತಿವಾರಿ (30 ಲಕ್ಷ).

ಕೋಲ್ಕತ ನೈಟ್​ ರೈಡರ್ಸ್​

ರೀಟೆನ್​ ಆಟಗಾರರು: ಅಜಿಂಕ್ಯ ರಹಾನೆ, ಆಂಗ್ಕ್ರಿಶ್ ರಘುವಂಶಿ, ಅನುಕೂಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋಮನ್​ ಪೊವೆಲ್, ಸುನಿಲ್ ನಾರಾಯಣ್​, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.
ಖರೀದಿಸಿ ಆಟಗಾರರು: ಕ್ಯಾಮರಾನ್ ಗ್ರೀನ್ (25.20 ಕೋಟಿ), ಮಥೀಶ ಪಥಿರಣ (18 ಕೋಟಿ), ಮುಸ್ತಾಫಿಜೂರ್ ರೆಹಮಾನ್ (9.20 ಕೋಟಿ), ತೇಜಸ್ವಿ ಸಿಂಗ್ (3 ಕೋಟಿ), ರಚಿನ್ ರವೀಂದ್ರ (2 ಕೋಟಿ), ಫಿನ್ ಆಲೆನ್ (2 ಕೋಟಿ), ಟಿಮ್ ಸೈಫರ್ಟ್ (1.5 ಕೋಟಿ), ಆಕಾಶ್ ದೀಪ್ (1 ಕೋಟಿ), ರಾಹುಲ್ ತ್ರಿಪಾಠಿ (85 ಲಕ್ಷ), ದಕ್ಷ್ ಕಮ್ರಾ (30 ಲಕ್ಷ), ಸಾರ್ಥಕ್ ರಂಜನ್ (30 ಲಕ್ಷ), ಪ್ರಶಾಂತ್ ಸೋಲಂಕಿ (30 ಲಕ್ಷ), ಕಾರ್ತಿಕ್ ತ್ಯಾಗಿ (30 ಲಕ್ಷ).

ಡೆಲ್ಲಿ ಕ್ಯಾಪಿಟಲ್ಸ್​

ರೀಟೆನ್​ ಆಟಗಾರರು: ಅಭಿಷೇಕ್ ಪೊರೆಲ್, ಅಜಯ್ ಮೊಂಡಲ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಮುಖೇಶ್ ಕುಮಾರ್, ನಿತೀಶ್ ರಾಣಾ (ಟ್ರೇಡ್​), ಸಮೀರ್ ರಿಜ್ವಿ, ಟಿ. ನಟರಾಜನ್, ತ್ರಿಪುರನ್ ವಿಜಯ್, ಟ್ರಿಸ್ಟನ್​ ಸ್ಟಬ್ಸ್​ ಹಾಗೂ ವಿಪ್ರಜ್​ ನಿಗಮ್​.
ಖರೀದಿಸಿದ ಆಟಗಾರರು: ಅಕೀಬ್ ದಾರ್ (8.40 ಕೋಟಿ), ಪಥುಮ್ ನಿಸ್ಸಂಕಾ (4 ಕೋಟಿ), ಬೆನ್ ಡಕೆಟ್ (2 ಕೋಟಿ), ಡೇವಿಡ್ ಮಿಲ್ಲರ್ (2 ಕೋಟಿ), ಲುಂಗಿ ಎನ್​ಗಿಡಿ (2 ಕೋಟಿ), ಕೈಲ್ ಜೇಮಿಸನ್ (2 ಕೋಟಿ), ಪೃಥ್ವಿ ಷಾ (75 ಲಕ್ಷ), ಸಾಹಿಲ್ ಪರಾಕ್ (30 ಲಕ್ಷ).

ಮುಂಬೈ ಇಂಡಿಯನ್ಸ್​

ರೀಟೆನ್​ ಆಟಗಾರರು: ಅಲ್ಲಾ ಘಜನ್‌ಫರ್, ಅಶ್ವಿನಿ ಕುಮಾರ್, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮಯಾಂಕ್ ಮಾರ್ಕಂಡೆ (ಟ್ರೇಡ್​), ಮಿಚೆಲ್ ಸ್ಯಾಂಟ್ನರ್, ನಮನ್ ಧೀರ್, ರಘು ಶರ್ಮಾ, ರಾಜ್ ಅಂಗದ್ ಬಾವಾ, ರಾಬಿನ್ ಮಿಂಜ್, ರೋಹಿತ್ ಶರ್ಮ, ರಿಯಾನ್ ರಿಕೆಲ್ಟನ್, ಶಾರ್ದುಲ್ ಠಾಕುರ್, ಶೆಫ್ರಾನ್​ ರುದಫೋರ್ಡ್​ (ಟ್ರೇಡ್​) ಸೂರ್ಯಕುಮಾರ್​ ಯಾದವ್, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್ ಹಾಗೂ ವಿಲ್ ಜಾಕ್ಸ್.
ಖರೀದಿಸಿದ ಆಟಗಾರರು: ಕ್ವಿಂಟನ್ ಡಿ ಕಾಕ್ (1 ಕೋಟಿ), ಮಯಾಂಕ್ ರಾವತ್ (30 ಲಕ್ಷ), ಅಥರ್ವ ಅಂಕೋಲ್ಕೆರ್ (30 ಲಕ್ಷ), ಮೊಹಮದ್ ಇಜಾರ್ (30 ಲಕ್ಷ), ದಾನೀಶ್ ಮಾಲೇವಾರ್ (30 ಲಕ್ಷ).

ರಾಜಸ್ಥಾನ ರಾಯಲ್ಸ್​

ರೀಟೆನ್​ ಆಟಗಾರರು: ಧ್ರುವ್ ಜುರೆಲ್, ಡೊನಾವನ್ ಫೆರೇರಾ (ಟ್ರೇಡ್​), ಜೋಫ್ರಾ ಆರ್ಚರ್, ಕ್ವೆನಾ ಮಫಕಾ, ಲುವಾನ್ ಡ್ರೆ ಪ್ರಿಟೋರಿಯಸ್, ನಂಡ್ರಿ ಬರ್ಗರ್, ರವೀಂದ್ರ ಜಡೇಜಾ (ಟ್ರೇಡ್​), ರಿಯಾನ್ ಪರಾಗ್, ಸ್ಯಾಮ್ ಕರ್ರಾನ್ (ಟ್ರೇಡ್​), ಸಂದೀಪ್ ಶರ್ಮಾ, ಶಿಮ್ರೋನ್ ಹೆಟ್ಮೆಯರ್, ಶುಭಂ ದುಬೆ, ತುಷಾರ್​ ದೇಶಪಾಂಡೆ, ವೈಭವ್​ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಹಾಗೂ ಯುದ್ಧವೀರ್ ಚರಕ್.
ಖರೀದಿಸಿದ ಆಟಗಾರರು: ರವಿ ಬಿಷ್ಣೋಯಿ (7.20 ಕೋಟಿ),ಆಡಂ ಮಿಲ್ನೆ (2.40 ಕೋಟಿ), ರವಿ ಸಿಂಗ್ (95 ಲಕ್ಷ), ಸುಶಾಂತ್ ಮಿಶ್ರಾ (90 ಲಕ್ಷ), ಅಮನ್ ರಾವ್ ಪೆರಲ (30 ಲಕ್ಷ), ಕುಲದೀಪ್ ಸೇನ್ (75 ಲಕ್ಷ), ಬ್ರಿಜೇಶ್ ಶರ್ಮ (30 ಲಕ್ಷ), ವಿಘ್ನೇಶ್ ಪುತ್ತೂರ್ (30 ಲಕ್ಷ), ಯಶ್ ರಾಜ್ ಪೂಂಜಾ (30 ಲಕ್ಷ).

ಸನ್​ ರೈಸರ್ಸ್​ ಹೈದರಾಬಾದ್​

ರೀಟೆನ್​ ಆಟಗಾರರು: ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಬ್ರೈಡನ್ ಕಾರ್ಸೆ, ಈಶಾನ್ ಮಾಲಿಂಗ, ಹರ್ಷ್ ದುಬೆ, ಹರ್ಷಲ್ ಪಟೇಲ್, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್, ಸ್ಮರಣ ರವಿಚಂದ್ರನ್, ಟ್ರಾವಿಸ್ ಹೆಡ್​ ಹಾಗೂ ಜಿಶ್‌ಸನ್ ಅನ್ಸಾರಿ.
ಖರೀದಿಸಿದ ಆಟಗಾರರು: ಲಿಯಾಮ್ ಲಿವಿಂಗ್ ಸ್ಟೋನ್ (13 ಕೋಟಿ), ಜಾಕ್ ಎಡ್ವರ್ಡ್ (3 ಕೋಟಿ), ಸಲೀಲ್ ಅರೋರ (1.50 ಕೋಟಿ), ಶಿವಂ ಮಾವಿ (75 ಲಕ್ಷ), ಕ್ರೈನ್ಸ್​ ಫುಲೆಟ್ರ 30 ಲಕ್ಷ), ಪ್ರಫುಲ್ ಹಿಂಗೆ (30 ಲಕ್ಷ), ಅಮಿತ್ ಕುಮಾರ್ (30 ಲಕ್ಷ), ಓಂಕಾರ್ ತರ್ಮಲೆ (30 ಲಕ್ಷ), ಸಕೀಬ್ ಹುಸೈನ್ (30 ಲಕ್ಷ), ಶಿವಾಂಗ್ ಕುಮಾರ್ (30 ಲಕ್ಷ).

ಪಂಜಾಬ್​ ಕಿಂಗ್ಸ್​

ರೀಟೆನ್​ ಆಟಗಾರರು: ಅರ್ಷದೀಪ್ ಸಿಂಗ್, ಅಜ್ಮತುಲ್ಲಾ ಒಮರ್ಜಾಯ್, ಹರ್ನೂರ್ ಪನ್ನು, ಹರ್‌ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಮಾರ್ಕೊ ಜಾನ್ಸೆನ್, ಮಾರ್ಕಸ್ ಸ್ಟೊಯಿನಿಸ್, ಮಿಚಲ್​ ಓವನ್, ಮುಶೀರ್ ಖಾನ್, ನೆಹಾಲ್ ವಧೇರಾ, ಪ್ರಭ್‌ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಪೈಲಾ ಅವಿನಾಶ್, ಶಶಾಂಕ್​ ಸಿಂಗ್​, ಶ್ರೇಯಸ್​ ಅಯ್ಯರ್​, ಸೂರ್ಯಾಂಶ್ ಶೆಡ್ಜ್, ವಿಷ್ಣು ವಿನೋದ್, ವೈಶಾಕ್ ವಿಜಯ್​ಕುಮಾರ್, ಕ್ಸೇವಿಯರ್ ಬಾರ್ಟ್ಲೆಟ್, ಯಶ್ ಠಾಕೂರ್ ಹಾಗೂ ಯುಜ್ವೇಂದ್ರ ಚಹಾಲ್.
ಖರೀದಿಸಿದ ಆಟಗಾರರು: ಬೆನ್ ಡ್ವಾರ್ಶಯಿಸ್ (4.40 ಕೋಟಿ), ಕೂಪರ್ ಕೊನ್ಹೊಲಿ (3 ಕೋಟಿ), ಪ್ರವೀಣ್ ದುಬೆ (30 ಲಕ್ಷ), ವಿಶಾಲ್ ನಿಶಾದ್ (30 ಲಕ್ಷ).

ಗುಜರಾತ್​ ಟೈಟಾನ್ಸ್​

ರೀಟೆನ್​ ಆಟಗಾರರು: ಅನುಜ್ ರಾವತ್, ಗ್ಲೆನ್ ಫಿಲಿಪ್ಸ್, ಗುರ್ನೂರ್ ಸಿಂಗ್ ಬ್ರಾರ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಜೋಸ್ ಬಟ್ಲರ್, ಕಗಿಸೊ ರಬಾಡ, ಕುಮಾರ್ ಕುಶಾಗ್ರಾ, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಅರ್ಷದ್ ಖಾನ್, ನಿಶಾಂತ್ ಸಿಂಧು, ಪ್ರಸಿದ್ಧ ಕೃಷ್ಣ, ಸಾಯಿ ಕಿಶೋರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಸುದರ್ಶನ್, ಶಾರುಖ್ ಖಾನ್, ಶುಭಮಾನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್.
ಖರೀದಿಸಿದ ಆಟಗಾರರು: ಜೇಸನ್ ಹೋಲ್ಡರ್ (7ಕೋಟಿ), ಟಾಮ್ ಬಾಂಟನ್ (2 ಕೋಟಿ), ಅಶೋಕ್ ಶರ್ಮ (90 ಲಕ್ಷ), ಲ್ಯೂಕ್ ವುಡ್ (75 ಲಕ್ಷ), ಪೃಥ್ವಿ ರಾಜ್ (30 ಲಕ್ಷ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net