ಭಾನುವಾರ (ಮೇ 31) ಅಹಮದಾಬಾದ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆದ ಫೈನಲ್ ಪಂದ್ಯದ ಬಳಿಕ ಎಲ್ಲರ ಕಣ್ಣುಗಳು ವೈಭವ್ ಮೇಲೆಯೇ ಇದ್ದವು. ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೈಭವ್ ಐದು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಆರೆಂಜ್ ಕ್ಯಾಪ್, ಅತ್ಯಂತ ಮೌಲ್ಯಯುತ ಆಟಗಾರ, ಋತುವಿನ ಉದಯೋನ್ಮುಖ ಆಟಗಾರ, ಸೂಪರ್ ಸ್ಟ್ರೈಕರ್ ಮತ್ತು ಹೆಚ್ಚಿನ ಸಿಕ್ಸರ್ ಪ್ರಶಸ್ತಿಗಳನ್ನು ವೈಭವ್ ತಮ್ಮದಾಗಿಸಿಕೊಂಡರು.