ವೈರಲ್ ವಿಡಿಯೋದಲ್ಲಿ ಖ್ಯಾತ ಕ್ರಿಕೆಟ್ ವಿಮರ್ಶಕ ಹರ್ಷ ಭೋಗ್ಲೆ ಅವರು ನೀವು ಕೂಡ ವಿರಾಟ್ ಕೊಹ್ಲಿ ಅವರಂತೆ ಕ್ರಿಕೆಟ್ ಜಗತ್ತನ್ನು ಆಳಲು ಬಯಸುತ್ತೀರಾ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವೈಭವ್ ಉತ್ತರಿಸುತ್ತಾ, "ನನಗೆ ವಿರಾಟ್ ಭಾಯ್ ಇಷ್ಟ, ಆದರೆ ಅವರ ರೆಕಾರ್ಡ್‌ಗಳು ಇಷ್ಟವಿಲ್ಲ. ಅವರು ಅತ್ಯಂತ ನಿಧಾನವಾಗಿ ಹಾಫ್ ಸೆಂಚುರಿ ಮತ್ತು ಸೆಂಚುರಿಗಳನ್ನು ಬಾರಿಸುತ್ತಾರೆ ಹಾಗೂ ಅವರು ಸ್ವಲ್ಪ ಸ್ವಾರ್ಥಿ ಎಂದೂ ಅನಿಸುತ್ತದೆ, ಆದರೆ ನನಗೆ ಅವರ ತರಹದ ಫ್ಯಾನ್ ಫಾಲೋಯಿಂಗ್ ಮಾತ್ರ ಬೇಕು ಎಂದು ಹೇಳುವಂತೆ ಎಡಿಟ್ ಮಾಡಲಾಗಿದೆ. ಈ ಉತ್ತರವನ್ನು ಕೇಳಿ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಸೇರಿದಂತೆ ವೇದಿಕೆ ಮೇಲಿರುವ ಹಾಗೂ ಪ್ರೇಕ್ಷಕರ ಸಾಲಿನಲ್ಲಿರುವ ಗಣ್ಯರು ನಗುತ್ತಿರುವಂತೆ ಬೇರೆ ಬೇರೆ ದೃಶ್ಯಗಳನ್ನು ಜೋಡಿಸಿ ಈ ಸುಳ್ಳು ವಿಡಿಯೋವನ್ನು ಸೃಷ್ಟಿಸಲಾಗಿದೆ.