ಮಾತು ಮುಂದುವರಿಸಿದ ಹಾರ್ದಿಕ್, ಬುಮ್ರಾ ಒಬ್ಬ ವಿಶೇಷ ಬೌಲರ್ ಆಗಿರುವುದರಿಂದ ತಂಡಕ್ಕೆ ಯಾವಾಗ ಅಗತ್ಯವಿದೆಯೋ ಆಗ ಅವರನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಹೊಸ ಚೆಂಡಿನ ಮೂಲಕ ಎದುರಾಳಿಗಳ ಮೇಲೆ ಆರಂಭದಲ್ಲೇ ಒತ್ತಡ ಹೇರಲು ಬುಮ್ರಾ ಅವರಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂಬ ಕಾರಣಕ್ಕೆ ಅವರಿಗೆ ಮೊದಲ ಓವರ್ ನೀಡಲಾಯಿತು ಎಂದು ಹಾರ್ದಿಕ್ ಅವರು ವಿವರಿಸಿದ್ದಾರೆ.