ಇತ್ತೀಚೆಗೆ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಜಿತೇಶ್ ಶರ್ಮಾ, ಪ್ರೀತಿ ಜಿಂಟಾ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ನಾನು ಅವರನ್ನು ಯಾವಾಗಲೂ ಅಕ್ಕನಂತೆಯೇ ನೋಡುತ್ತೇನೆ. ನಾನು ಹಿಮಾಚಲ ಪ್ರದೇಶದವನು ಎಂದು ತಿಳಿದಾಗ ಅವರು ನನ್ನೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ನನ್ನ ವೃತ್ತಿಜೀವನಕ್ಕೆ ಪಂಜಾಬ್ ಕಿಂಗ್ಸ್ ದೊಡ್ಡ ತಿರುವು ನೀಡಿತು ಎಂದು ಜಿತೇಶ್ ಭಾವುಕರಾಗಿ ಹೇಳಿದ್ದಾರೆ.