ಕಡೆಗೂ ಧೋನಿ ದರ್ಶನ! ಪಂದ್ಯ ಸೋತ ಬೆನ್ನಲ್ಲೇ ಮೈದಾನಕ್ಕಿಳಿದ 'ಕ್ಯಾಪ್ಟನ್​ ಕೂಲ್'​ ಕಂಡು ಫ್ಯಾನ್ಸ್ ಭಾವುಕ | MS Dhoni

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಆರ್​ಎಚ್​ ವಿರುದ್ಧ ನಿರ್ಣಾಯಕ ಪಂದ್ಯ ಸೋತ ಸಿಎಸ್​ಕೆ
  • ಪ್ಲೇಆಫ್​ ರೇಸ್​ನಿಂದ ಹಿಂದುಳಿದ ರುತುರಾಜ್ ಗಾಯಕ್ವಾಡ್​ ಪಡೆ
  • ​ಪಂದ್ಯ ಸೋತ ಬೆನ್ನಲ್ಲೇ ಅಭಿಮಾನಿಗಳ ಮುಂದೆ ಧೋನಿ ಹಾಜರು
MS Dhoni: ನಿನ್ನೆ (ಮೇ.18) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಕಡೆಗೂ ಸಿಎಸ್​ಕೆ ಸೋಲಿನ ಹಾದಿ ಹಿಡಿಯುವ ಮೂಲಕ ಪ್ಲೇಆಫ್​ ರೇಸ್​ನಿಂದ ದೂರ ಸರಿಯಿತು.
ಇಶಾನ್ ಕಿಶಾನ್​ ಅವರ ಅಮೋಘ ಬ್ಯಾಟಿಂಗ್​ ಪ್ರದರ್ಶನದಿಂದ ಗೆಲುವಿನ ದಡ ಸೇರಿದ ಎಸ್​ಆರ್​ಎಚ್​, ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಆದರೆ, ಪಂಜಾಬ್​ ಕಿಂಗ್ಸ್​ ಸೋಲಿನ ಮೂಲಕ ಪ್ಲೇಆಫ್​ಗೆ ಲಗ್ಗೆಯಿಡಲು ಸಿಕ್ಕ ಸುವರ್ಣಾವಕಾಶವನ್ನು ಮತ್ತೊಮ್ಮೆ ಕಳಪೆ ಪ್ರದರ್ಶನದಿಂದ ಚೆನ್ನೈ ಪಡೆ ಕೈಚೆಲ್ಲಿದೆ. ಇದು ಫ್ರಾಂಚೈಸಿಯ ಅಭಿಮಾನಿಗಳನ್ನು ಅಕ್ಷರಶಃ ಬೇಸರಕ್ಕೆ ದೂಡಿತು. ಇದೇ ಸಮಯದಲ್ಲಿ ಮೈದಾನಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, ಫ್ಯಾನ್ಸ್​ಗಳತ್ತ ಕೈಬೀಸಿದ್ದು ಕೆಲ ಕ್ಷಣ ಫ್ಯಾನ್ಸ್​ಗಳ ಕಣ್ಣುಗಳನ್ನು ಒದ್ದೆಯಾಗಿಸಿತು.
ಇಲ್ಲಿಯವರೆಗೆ ಯಾವುದೇ ಪಂದ್ಯದಲ್ಲಿಯೂ ತಂಡದ ಪರ ಆಡದ ಧೋನಿ, ಪ್ಲೇಆಫ್​ ಪ್ರವೇಶಿಸಲು ಸಿಕ್ಕ ಅವಕಾಶವನ್ನು ಸಿಎಸ್​ಕೆ ಕಳೆದುಕೊಂಡ ಬೆನ್ನಲ್ಲೇ ತನಗಾಗಿ ಸ್ಟೇಡಿಯಂ ತುಂಬಿದ್ದ ಅಭಿಮಾನಿಗಳನ್ನು ನೋಡಲು ಮೈದಾನಕ್ಕಿಳಿದರು. ಮಾಹಿ ಬರುತ್ತಿಲ್ಲ ಎಂದು ಪ್ರತಿ ಪಂದ್ಯದಲ್ಲಿಯೂ ತೀವ್ರ ಬೇಸರದಿಂದ ಕೂರುತ್ತಿದ್ದ ಫ್ಯಾನ್ಸ್​ಗೆ ಕಡೆಗೂ ಧೋನಿ ದರ್ಶನ ಕಂಡು ಕಣ್ಣಂಚಲ್ಲಿ ನೀರು ಮೂಡಿತು.
ತಂಡದ ಆಟಗಾರರ ಜೊತೆ ಮೈದಾನದಲ್ಲಿ ಹೆಜ್ಜೆ ಹಾಕಿದ ಮಹೇಂದ್ರ ಸಿಂಗ್ ಧೋನಿ, ಎಲ್ಲ ಅಭಿಮಾನಿಗಳಿಗೂ ಕೈಬೀಸಿದರು. ತಮ್ಮ ನೆಚ್ಚಿನ ಕ್ಯಾಪ್ಟನ್​ ಕೂಲ್​, ದಿಗ್ಗಜ ಕ್ರಿಕೆಟಿಗನನ್ನು ಹಲವು ದಿನಗಳ ಬಳಿಕ ಕಂಡು ಫ್ಯಾನ್ಸ್ ಭಾವುಕರಾದರು. ಇದನ್ನು ನೋಡಿದ ಬಳಿಕ ಹಲವರು, ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಧೋನಿ ಕಣಕ್ಕಿಳಿಯಬಹುದು. ಬ್ಯಾಟಿಂಗ್​ ಮತ್ತು ಕೀಪಿಂಗ್ ಮಾಡುವ ಮೂಲಕ ಐಪಿಎಲ್​ಗೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ಊಹಿಸಿದ್ದಾರೆ.

ಪಂದ್ಯದ ವಿವರ

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು. ಈ ಸಾಧಾರಣ ರನ್‌ಗಳ ಗುರಿಯನ್ನು ಬೆನ್ನತ್ತಿದ ಪ್ಯಾಟ್​ ಕಮ್ಮಿನ್ಸ್ ಪಡೆ 1 ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಮುಗಿಸಿತು. ತಂಡದ ಪರ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಮಾಡಿದರು. 47 ಎಸೆತಗಳಲ್ಲಿ 70 ರನ್ ಸಿಡಿಸಿ, ಸಿಎಸ್​ಕೆ ವಿರುದ್ಧ 5 ವಿಕೆಟ್​ಗಳ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ, ಹೈದರಾಬಾದ್ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಕೂಡ ಪ್ಲೇಆಫ್‌ಗೆ ಲಗ್ಗೆಯಿಟ್ಟಿದೆ. ಇಲ್ಲಿಯವರೆಗೆ, ಮೂರು ತಂಡಗಳು ಈ ಹಂತಕ್ಕೆ ಪ್ರವೇಶ ಪಡೆದಿವೆ. ಆರ್​ಸಿಬಿ, ಜಿಟಿ ಮತ್ತು ಎಸ್​ಆರ್​ಎಚ್​ ಪ್ಲೇಆಫ್​ ತಲುಪಿದ್ದು, ಸಿಎಸ್​ಕೆಗೆ ಇನ್ನೂ ಅವಕಾಶವಿದೆ. ಆದರೆ, ರಾಜಸ್ಥಾನ ರಾಯಲ್ಸ್ ಎರಡು ಪಂದ್ಯ ಮತ್ತು ಪಂಜಾಬ್ ಕಿಂಗ್ಸ್ ಒಂದು ಪಂದ್ಯವನ್ನು ಸೋತರೆ ಮಾತ್ರ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net