FIFA WorldCup: ಇದು ಸತತ 2 ಪ್ರಶಸ್ತಿ ಗೆಲುವಿನ ವರ್ಷ? ಆರ್​ಸಿಬಿ, ಪಿಎಸ್​ಜಿ ಸಾಧನೆ ಪುನರಾವರ್ತಿಸುವುದೇ ಅರ್ಜೆಂಟೀನಾ?

Published on
ಬೆಂಗಳೂರು: ಕಳೆದ ವರ್ಷ ಬಹುತೇಕ ಕ್ರೀಡಾಕೂಟಗಳಲ್ಲಿ ಹೊಸ ಚಾಂಪಿಯನ್​ ಉದಯಿಸಿದ್ದರೆ, ಹಾಲಿ ವರ್ಷದ ಬಹುತೇಕ ಕ್ರೀಡಾಕೂಟಗಳಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಗೆಲುವಿನ ಟ್ರೆಂಡ್​ ಕಾಣಿಸಿದೆ. ಹೀಗಾಗಿ ಫಿಫಾ ವಿಶ್ವಕಪ್​ನಲ್ಲೂ (FIFA WorldCup) ಅರ್ಜೆಂಟೀನಾ ಈ ಟ್ರೆಂಡ್​ ಮುಂದುವರಿಸುವುದೇ ಎಂಬ ಕುತೂಹಲ ಹರಡಿದೆ.

ಭಾರತ ತಂಡ ಹಾಲಿ ವರ್ಷ ಟಿ20 ವಿಶ್ವಕಪ್​ನಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಜಯಿಸಿದ್ದರೆ, ಐಪಿಎಲ್​ನಲ್ಲಿ ಆರ್​ಸಿಬಿ (RCB) ತಂಡವೂ ಸತತ 2ನೇ ಬಾರಿ ಚಾಂಪಿಯನ್​ ಪಟ್ಟವೇರಿತ್ತು. ಚಾಂಪಿಯನ್ಸ್​ ಲೀಗ್​ನಲ್ಲಿ ಪ್ಯಾರಿಸ್​ ಸೇಂಟ್​-ಜಮೈರ್ನ್​ (ಪಿಎಸ್​ಜಿ) ತಂಡ ಸತತ 2ನೇ ಬಾರಿ ಪ್ರಶಸ್ತಿ ಗೆದ್ದಿದ್ದರೆ, ವಿಂಬಲ್ಡನ್​ನಲ್ಲಿ ಯಾನಿಕ್​ ಸಿನ್ನರ್​ ಕೂಡ ಇಂಥದ್ದೇ ಸಾಧನೆ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net