ಆಗಸ್ಟ್ 2025 ರಲ್ಲಿ ಈ ಜೋಡಿಯ ನಿಶ್ಚಿತಾರ್ತ ಸಮಾರಂಭವು ಕೇವಲ ಹತ್ತಿರದ ಕುಟುಂಬ ಸದಸ್ಯರ ಸಾಕ್ಷಿಯಲ್ಲಿ ಗೌಪ್ಯವಾಗಿಯೇ ನಡೆದಿತ್ತು. ರೆಡ್ಡಿಟ್ನಲ್ಲಿ ಸಚಿನ್ ಸ್ವತಃ ತಮ್ಮ ಮಗನ ಮದುವೆ ಬಗ್ಗೆ ತಿಳಿಸಿದ್ದು, ಅಭಿಮಾನಿಯೊಬ್ಬರು ನಿಮ್ಮ ಮಗ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಸ್ಟರ್ ಬ್ಲಾಸ್ಟರ್, ಹೌದು ಅವನ ನಿಶ್ಚಿತಾರ್ಥ ಈಗಾಗಲೇ ನೆರವೇರಿದ್ದು, ಇದೇ ವರ್ಷದ ಮಾರ್ಚ್ 3 ರಿಂದ 5 ರ ವರೆಗೆ ವಿವಾಹ ಮಹೋತ್ಸವ ನಡೆಯಲಿದೆ ಎಂದು ಉತ್ತರಿಸಿದ್ದಾರೆ.