ಏಷ್ಯಾಡ್ ಮಹಿಳಾ ಕ್ರಿಕೆಟ್: ಸೆಮೀಸ್‌ಗೆ ಭಾರತ, ಪಾಕ್; ಹರ್ಮಾನ್‌ಪಡೆಗೆ ಸುಲಭ ತುತ್ತಾದ ಜಪಾನ್

ಏಷ್ಯಾಡ್ ಮಹಿಳಾ ಕ್ರಿಕೆಟ್: ಸೆಮೀಸ್‌ಗೆ ಭಾರತ, ಪಾಕ್; ಹರ್ಮಾನ್‌ಪಡೆಗೆ ಸುಲಭ ತುತ್ತಾದ ಜಪಾನ್
ಏಷ್ಯಾಡ್ ಮಹಿಳಾ ಕ್ರಿಕೆಟ್: ಸೆಮೀಸ್‌ಗೆ ಭಾರತ, ಪಾಕ್; ಹರ್ಮಾನ್‌ಪಡೆಗೆ ಸುಲಭ ತುತ್ತಾದ ಜಪಾನ್
Published on
ಐಚಿ ನಗೋಯಾ: ಶೆಫಾಲಿ ವರ್ಮ (40* ರನ್, 15 ಎಸೆತ, 6 ಬೌಂಡರಿ, 2 ಸಿಕ್ಸರ್, 13ಕ್ಕೆ 2 ವಿಕೆಟ್) ಆಲ್ರೌಂಡ್ ಆಟ ಮತ್ತು ಶ್ರೀಚರಣಿ (10ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಸ್ಪರ್ಧೆಯ ಕ್ವಾರ್ಟರ್ ಫೈ ನಲ್‌ನಲ್ಲಿ ಆತಿಥೇಯ ಜಪಾನ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಭಾನುವಾರ ಬಾಂಗ್ಲಾದೇಶ ಎದುರು ಫೈನಲ್‌ಗೇರಲು ಸೆಣಸಲಿದೆ.
ನಿಶ್ಶಿನ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಜಪಾನ್, 19.5 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕರಿಬ್ಬರು ಹೊರತುಪಡಿಸಿ ಇತರ ಯಾವ ಬ್ಯಾಟುಗಾರ್ತಿಯರು ಎರಡಂಕಿ ದಾಖಲಿಸಲಿಲ್ಲ. ಪ್ರತಿಯಾಗಿ ಭಾರತ ಕೇವಲ 5 ಓವರ್‌ಗಳಲ್ಲಿ 2 ವಿಕೆಟ್‌ಗೆ 59 ರನ್‌ಗಳಿಸಿತು. ಈ ಮೂಲಕ ಇನ್ನು 15 ಓವರ್ ಬಾಕಿಯಿರುವಂತೆಯೆ ಸುಲಭ ಜಯ ಕಂಡಿತು.
ಜಪಾನ್: 19.5 ಓವರ್‌ಗಳಲ್ಲಿ 57(ಹರುನಾ 10, ಅಯಕಾ 25, ಇರಿಕಾ 5, ಶಿಮಕೊ 3, ಅಕರಿ 2, ಆಯುಮಿ 4*, ಶ್ರೀಚರಣಿ 10ಕ್ಕೆ 4, ಶೆಫಾಲಿ ವರ್ಮ 13ಕ್ಕೆ 2).
ಭಾರತ: 5 ಓವರ್‌ಗಳಲ್ಲಿ 2 ವಿಕೆಟ್‌ಗೆ 59 (ಶೆಫಾಲಿ ವರ್ಮ 40*, ಜಿ.ಕಮಲಿನಿ 0, ಭಾರತಿ 6, ರಿಚಾ ೋಷ್ 12*, ನೊನೊಹ 8ಕ್ಕೆ 1, ಅಯಕಾ 14ಕ್ಕೆ 1).
ಸೆಮಿಫೈನಲ್ಸ್
ಯಾವಾಗ: ಭಾನುವಾರ
ಶ್ರೀಲಂಕಾ-ಪಾಕಿಸ್ತಾನ
ಭಾರತ-ಬಾಂಗ್ಲಾದೇಶ
ಆರಂಭ: ಬೆಳಗ್ಗೆ 10.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net