ಐಪಿಎಲ್ ನಿಯಮಗಳನ್ನು ಉಲ್ಲೇಖಿಸಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಲಲಿತ್ ಮೋದಿ, "ಐಪಿಎಲ್ ನಿಯಮಾವಳಿಗಳ ಪ್ರಕಾರ, ಯಾವುದೇ ಫ್ರಾಂಚೈಸಿಯು ಆಟಗಾರನಿಗೆ ನೇರವಾಗಿ ಹಣ ಅಥವಾ ದುಬಾರಿ ಉಡುಗೊರೆಗಳನ್ನು ನೀಡಿ ಖರೀದಿಸಲು ಅವಕಾಶವಿಲ್ಲ. ಯಾವುದೇ ಆಟಗಾರ ತಂಡವನ್ನು ಸೇರಬೇಕಿದ್ದರೂ ಅಧಿಕೃತ ಪ್ರಕ್ರಿಯೆಯನ್ನು ಪಾಲಿಸಲೇಬೇಕು. ಆಟಗಾರನ ತಂಡ ಬದಲಾವಣೆ ಅಥವಾ ಹೊಸ ತಂಡಕ್ಕೆ ಸೇರ್ಪಡೆ ಕೇವಲ ಟ್ರೇಡಿಂಗ್ ವಿಂಡೋ ಅಥವಾ ಹರಾಜಿನ (Auction) ಮೂಲಕ ಮಾತ್ರ ಸಾಧ್ಯ. ವೈಭವ್ ಸೂರ್ಯವಂಶಿ ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ದೊಡ್ಡ ತಾರೆಯಾಗಿ ಹೊರಹೊಮ್ಮಬಹುದು ಮತ್ತು ಭವಿಷ್ಯದಲ್ಲಿ ಅವರ ಮೇಲೆ ದೊಡ್ಡ ಮಟ್ಟದ ಹರಾಜು ಕೂಗಬಹುದು. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕತೆಗಳಿಗೂ, ವಾಸ್ತವಕ್ಕೂ ಹಾಗೂ ಸತ್ಯಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.