ಐಪಿಎಲ್ 2026ರ ಹರಾಜಿನಲ್ಲಿ ಕೆಕೆಆರ್ ತಂಡವು ಶ್ರೀಲಂಕಾದ ವೇಗಿ ಮಥೀಶಾ ಪತಿರಾಣ ಅವರನ್ನು ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಅವರು ಕೆಕೆಆರ್ ಪರ ಕೇವಲ ಒಂದು ಪಂದ್ಯವನ್ನಾಡಿ ಗಾಯಗೊಂಡರು. ಪರಿಣಾಮವಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.
ಉತ್ತರ ಪ್ರದೇಶದ ಅನ್ಕ್ಯಾಪ್ಡ್ ಆಲ್ರೌಂಡರ್ ಪ್ರಶಾಂತ್ ವೀರ್ ಅವರನ್ನು ಸಿಎಸ್ಕೆ 14.20 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಈ ವರ್ಷ ಆಡಿದ 6 ಪಂದ್ಯಗಳಲ್ಲಿ ಅವರು ಕೇವಲ 90 ರನ್ ಗಳಿಸಿ, ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಹೊಸ ಆಟಗಾರರ ಖರೀದಿಗೆ ಹಣ ಹೊಂದಿಸಲು ಸಿಎಸ್ಕೆ ಅವರನ್ನು ಕೈಬಿಟ್ಟಿದೆ.
ಎಸ್ಆರ್ಎಚ್ ತಂಡವು 14 ಕೋಟಿ ರೂ. ನೀಡಿ ಉಳಿಸಿಕೊಂಡಿದ್ದ ಆಸ್ಟ್ರೇಲಿಯಾದ ಸ್ಫೋಟಕ ಓಪನರ್ ಟ್ರಾವೆಸ್ ಹೆಡ್, ಐಪಿಎಲ್ 2027ರ ಆವೃತ್ತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅವರ ಲಭ್ಯತೆ ಇಲ್ಲದ ಕಾರಣ ಎಸ್ಆರ್ಎಚ್ ಅವರನ್ನು ಬಿಡುಗಡೆ ಮಾಡಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡಿದ್ದ ನ್ಯೂಜಿಲೆಂಡ್ನ ಅನುಭವಿ ವೇಗಿ ಟ್ರೆಂಟ್ ಬೌಲ್ಟ್, ಐಪಿಎಲ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮುಂಬೈ ಫ್ರಾಂಚೈಸಿ ಅವರನ್ನು ಹೊರಹಾಕಿದೆ.
ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಐಪಿಎಲ್ 2027ರ ಆವೃತ್ತಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 11.75 ಕೋಟಿ ರೂ. ಮೊತ್ತವನ್ನು ಮುಕ್ತಗೊಳಿಸಲು ಅವರನ್ನು ಬಿಡುಗಡೆ ಮಾಡಿದೆ.
ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದಿಂದ 11 ಕೋಟಿ ರೂ.ಗೆ ಉಳಿಸಲ್ಪಟ್ಟಿದ್ದ ವೆಸ್ಟ್ ಇಂಡೀಸ್ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್, ಕಳೆದ ಎರಡು ಸೀಸನ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ಆರಂಭಿಕ ಚಾಂಪಿಯನ್ಸ್ ತಂಡವು ಅವರನ್ನು ಕೈಬಿಟ್ಟಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎಲ್ಎಸ್ಜಿ ಸೇರಿದ್ದ ಭಾರತೀಯ ವೇಗಿ ಅವೇಶ್ ಖಾನ್, ಕಳೆದ ಎರಡು ಸೀಸನ್ಗಳಲ್ಲಿ ಆಡಿದ 20 ಪಂದ್ಯಗಳಿಂದ 19 ವಿಕೆಟ್ಗಳನ್ನು ಪಡೆದಿದ್ದು, ಇದೀಗ ಅವರನ್ನು ಲಕ್ನೋ ಫ್ರಾಂಚೈಸಿ ಬಿಡುಗಡೆ ಮಾಡಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ವೇಗಿ ದೀಪಕ್ ಚಹಾರ್ ಅವರೊಂದಿಗಿನ ಒಪ್ಪಂದವನ್ನು ಮುಂಬೈ ಫ್ರಾಂಚೈಸಿ ಮುಕ್ತಾಯಗೊಳಿಸಿದೆ.
ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರು ಐಪಿಎಲ್ 2026ರ ಹರಾಜಿನಲ್ಲಿ ಕೆಕೆಆರ್ ಸೇರಿದ್ದರೂ, ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಸದ್ಯ ಅವರನ್ನು ಕೆಕೆಆರ್ ಬಿಡುಗಡೆ ಮಾಡಿದೆ.
ಕಳೆದ ಎರಡು ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಮುಂಬೈ ಮೂಲದ ವೇಗಿ ತುಷಾರ್ ದೇಶಪಾಂಡೆ (ರೂ. 6.50 ಕೋಟಿ ಒಪ್ಪಂದ) ಅವರನ್ನು ಐಪಿಎಲ್ 2027ರ ಹರಾಜಿಗೂ ಮುನ್ನ ರಾಜಸ್ಥಾನ ತಂಡವು ಕೈಬಿಟ್ಟಿದೆ.