

ನವದೆಹಲಿ: ಕರೊನಾ ಭೀತಿ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಈ ವರ್ಷವೇ ನಡೆಯುವ ಬಗ್ಗೆ ಶೇ. 60ರಷ್ಟು ಕ್ರಿಕೆಟ್ ಪ್ರೇಮಿಗಳು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಪೈಕಿ ಶೇ. 13ರಷ್ಟು ಜನರು, ಖಾಲಿ ಕ್ರೀಡಾಂಗಣ
ದಲ್ಲಾದರೂ ಪಂದ್ಯಗಳನ್ನು ನಡೆಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಯೊಂದು ತಿಳಿಸಿದೆ. ‘ಮೈಟೀಮ್1’ ನಡೆಸಿದ ಸಮೀಕ್ಷೆಯ ಪ್ರಕಾರ, ಕ್ರೀಡಾಸ್ಪರ್ಧೆಗಳು ಶೀಘ್ರದಲ್ಲೇ ಮರಳಬಹುದಾದರೂ, ಪ್ರೇಕ್ಷಕ ರಿಗೆ ಸದ್ಯಕ್ಕೆ ಅವಕಾಶ ಲಭಿಸಲಾರದು. ಸುಮಾರು 10 ಸಾವಿರ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಶೇ. 83ರಷ್ಟು ಜನರು ಕ್ರೀಡಾಸ್ಪರ್ಧೆಗಳು 2020ರ ಅಂತ್ಯದೊಳಗೆ ಪುನರಾರಂಭಗೊಳ್ಳಲಿದೆ ಎಂದಿದ್ದಾರೆ.
ಈ ಪೈಕಿ ಶೇ. 40ರಷ್ಟು ಜನರು 2021ರವರೆಗೂ ಕ್ರೀಡಾ ಸ್ಪರ್ಧೆಗಳ ವೀಕ್ಷಣೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ. ಐಪಿಎಲ್ ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.