ಮುಂಬೈ: ವಿಶ್ವ ಕ್ರಿಕೆಟ್ ಪ್ರಿಯರ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2020ನೇ ಆವೃತ್ತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ದಿನಾಂಕ ೋಷಿಸಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಸೆಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೆ ಯುಎಇಯಲ್ಲಿ 13ನೇ ಐಪಿಎಲ್ ನಡೆಯಲಿದೆ. ಅರಬ್ ರಾಷ್ಟ್ರದಲ್ಲಿ 51 ದಿನ 60 ಪಂದ್ಯಗಳ ಆಯೋಜನೆಗೆ ವೇದಿಕೆಯನ್ನೂ ಅಣಿಗೊಳಿಸಲಾಗುತ್ತಿದೆ. ಆದರೆ, ಈಗ ಬಹುಮುಖ್ಯವಾಗಿ ಲಾಜಿಸ್ಟಿಕ್ಸ್‌ನದ್ದೇ (ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಟಗಾರರ ಪ್ರಯಾಣ, ಅವರ ಸಾಮಾನು-ಸರಂಜಾಮು ಸಾಗಣೆ) ಬಹುದೊಡ್ಡ ಸಮಸ್ಯೆ ಆಗಿದೆ.
ಟೂರ್ನಿಯ ಆರಂಭಕ್ಕೂ ಮುನ್ನ ಕನಿಷ್ಠ ಮೂರು ವಾರ ಮೊದಲು ಎಲ್ಲ ಆಟಗಾರರು ಒಂದೆಡೆ ಸೇರುವಂತೆ ಆಗಬೇಕು ಎಂಬುದು ್ರಾಂಚೈಸಿಗಳ ಬಳಕೆ. ಆದ್ದರಿಂದ, ಆಗಸ್ಟ್ ಮಧ್ಯ ಭಾಗದಲ್ಲೇ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಯುಎಇ ತಲುಪಬೇಕಿದೆ. ಕಳೆದ 6 ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಕ್ರಿಕೆಟಿಗರಿಗೆ ಕಠಿಣ ಅಭ್ಯಾಸ ಅಗತ್ಯವಾಗಿರುತ್ತದೆ.
1200ಕ್ಕೂ ಅಧಿಕ ಮಂದಿ ಜಮಾವಣೆ
8 ಫ್ರಾಂಚೈಸಿಗಳಿಂದ ಅಂದಾಜು 200 ಆಟಗಾರರು, ಸಹಾಯಕ ಸಿಬ್ಬಂದಿ, ತಂಡದ ಆಡಳಿತ ಮಂಡಳಿ ಸದಸ್ಯರು, ಕಾರ್ಯನಿರ್ವಾಹಕರು, ಫ್ರಾಂಚೈಸಿ ಪ್ರತಿನಿಧಿಗಳು, ಇವರೆಲ್ಲರ ಕಿಟ್‌ಗಳು ಹಾಗೂ ವ್ಯವಸ್ಥಾಪಕರು, ಮ್ಯಾಚ್ ರೆಫ್ರಿಗಳು, ಟೀವಿ ಸಿಬ್ಬಂದಿ ಸೇರಿ ಕನಿಷ್ಠ ಎಂದರೂ 1,200 ಮಂದಿ ಯುಎಇನಲ್ಲಿ ಜಮಾವಣೆಗೊಳ್ಳಲಿದ್ದಾರೆ. ವಿದೇಶಿ ಆಟಗಾರರಿಗೆ ನೇರವಾಗಿ ಯುಎಇಗೆ ಬರಲು ಸೂಕ್ತ ಏರ್ಪಾಡುಗಳನ್ನು ಮಾಡಿಕೊಡಬೇಕಾಗುತ್ತದೆ.
ಹಿಂದೆಯೂ ವಿದೇಶದಲ್ಲಿ ಆಯೋಜನೆಗೊಂಡಿತ್ತು
2009ರ ಐಪಿಎಲ್ ಟೂರ್ನಿಯನ್ನು ಪೂರ್ಣ ಪ್ರಮಾಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ 2014ರ ಆವೃತ್ತಿಯಲ್ಲಿ ಕೆಲ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈ ಬಾರಿಯ ಪರಿಸ್ಥಿತಿಯೇ ಬೇರೆ. ಕರೊನಾ ವೈರಾಣು ಸೋಂಕಿನ ಭೀತಿ ಇರುವುದರಿಂದ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಅಲ್ಲದೆ, ವೀಸಾ ಪಡೆಯಲು ಸಹಾಯ ಮಾಡುವಂತೆ ತಂಡದ ಮಾಲೀಕರು ಈಗಾಗಲೇ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದ್ದಾರೆ.
ತಪ್ಪಿದ್ದಲ್ಲ ಕಾಟ..!
ಐಪಿಎಲ್ ಆರಂಭಗೊಂಡ ಮೇಲೂ ಎಲ್ಲವೂ ಮುಗಿಯಿತು ಎಂದು ಭಾವಿಸುವಂತಿಲ್ಲ. ಸ್ಥಳೀಯ ಸರ್ಕಾರದ ಮಾರ್ಗಸೂಚಿಯಂತೆ ಜೈವಿಕ ಸುರಕ್ಷ ವಾತಾವರಣದ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಬಿಸಿಸಿಐ ಮೇಲಿದೆ. ಯುಎಇಗೆ ಹೊರಡುವ 72 ಗಂಟೆ ಮೊದಲು, ತಲುಪಿದ ನಂತರ 72 ಗಂಟೆಯೊಳಗೆ ಆಟಗಾರರು, ಸಹಾಯಕ ಸಿಬ್ಬಂದಿ ಒಳಗೊಂಡಂತೆ ಎಲ್ಲರನ್ನೂ ಕೋವಿಡ್-19 ಪರೀಕ್ಷೆ ಮಾಡಬೇಕಾಗುತ್ತದೆ. ಯಾರಲ್ಲಾದರೂ ಸಣ್ಣ ಲಕ್ಷಣ ಕಂಡು ಬಂದರೂ ಅವರನ್ನು 72 ಗಂಟೆ ಕ್ವಾರಂಟೈನ್‌ನಲ್ಲಿ ಇರಿಸಿ ಗಮನಿಸಬೇಕಾಗುತ್ತದೆ. ಆನಂತರ ಇವರ ಬಗ್ಗೆ ಯುಎಇ ಸರ್ಕಾರದ ನೀತಿಗಳ ಅನ್ವಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೆಲವೊಂದು ್ರಾಂಚೈಸಿಗಳು ಸ್ವತಃ ವಿಮಾನ ಬಾಡಿಗೆ ಪಡೆಯಲು ಮುಂದಾಗಿವೆ.
ಯುಎಇ ಆಯ್ಕೆಗೆ ಕಾರಣ.
ಯುಎಇಯಲ್ಲಿ ಸದ್ಯ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಕೋವಿಡ್-19 ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರ ಇರುವ ವಿದೇಶಿ ಪ್ರವಾಸಿಗರು ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆಯಿಲ್ಲ. ಕ್ರಿಕೆಟಿಗರು ಭಾರತದಲ್ಲೇ ಕರೊನಾ ಪರೀಕ್ಷೆಗೆ ಒಳಪಟ್ಟು ಯುಎಇಗೆ ತೆರಳುವ ಕಾರಣ ಕ್ವಾರಂಟೈನ್ ಸಮಸ್ಯೆ ಇರುವುದಿಲ್ಲ. ಯುಎಇಯಲ್ಲಿ 3 ಸುಸಜ್ಜಿತ ಕ್ರಿಕೆಟ್ ಮೈದಾನಗಳಿವೆ. ದುಬೈನಲ್ಲಿ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ, ಅಬುಧಾಬಿಯಲ್ಲಿ ಶೇಖ್ ಜಯೆದ್ ಸ್ಟೇಡಿಯಂ ಮತ್ತು ಶಾರ್ಜಾದಲ್ಲಿ ಶಾರ್ಜಾ ಗ್ರೌಂಡ್ ಇದೆ. ಇದಲ್ಲದೆ ಈ 3 ಮೈದಾನ ಅಥವಾ ನಗರಗಳ ನಡುವೆ ಹೆಚ್ಚಿನ ಅಂತರವಿಲ್ಲ.