

ನವದೆಹಲಿ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಮುಕ್ತಾಯಗೊಂಡು ವಿಶ್ವಕಪ್ ಆರಂಭವಾಗಿದ್ದು, ಜನರು ಐಪಿಎಲ್ನ ಹ್ಯಾಂಗ್ಓವರ್ನಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ನಲ್ಲಿ ರನ್ ಹೊಳೆಯೇ ಹರಿದಿದ್ದು, ಹಲವು ದಾಖಲೆಗಳು ಸೃಷ್ಟಿಯಾಗಿದೆ. ದಾಖಲೆ ಸೃಷ್ಟಿಸಿದ ಯಾವುದಾದರು ತಂಡ ಇದ್ದರೆ ಮೊದಲಿಗೆ ಕೇಳಿ ಬರುವ ಹೆಸರಿ ಕಾವ್ಯಾ ಮಾರನ್ ಒಡೆತನದ ಸನ್ರೈಸರ್ಸ್ ಹೈದರಾಬಾದ್ ಎಂದು ಹೇಳಬಹುದಾಗಿದೆ.
ಎಸ್ಆರ್ಎಚ್ ಪರ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಏಡೆನ್ ಮಾರ್ಕ್ರಾಮ್ ಸ್ಪೋಟಕ ಆಟವಾಡುವ ಮೂಲಕ ತಂಡದ ಪರ ಹಲವು ದಾಖಲೆಗಳನ್ನು ಸೃಷ್ಟಿಸಿದ್ದರು. ಇನ್ನೂ ಈ ಕುರಿತು ಮಾತನಾಡಿರುವ ಎಸ್ಆರ್ಎಚ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ಆರ್ಸಿಬಿ ತಂಡದ ಆಟಗಾರ ನೀಡಿದ ಸಲಹೆ ಮೇರೆಗೆ ಅವರು ಟೂರ್ನಿಯಲ್ಲಿ ಸಿಕ್ಸರ್ ಸಿಡಿಸಿ ಹೆಚ್ಚು ರನ್ ಗಳಿಸಲು ಸಹಾಯ ಮಾಡಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕ್ಲಾಸೆನ್, ಇತ್ತೀಚಿಗೆ ನಾನು ಫಾಫ್ನೊಟ್ಟಿಗೆ ಮಾತನಾಡುವಾಗ ಐಪಿಎಲ್ನಲ್ಲಿ ನೀವು ಹೆಚ್ಚು ರನ್ ಗಳಿಸಲು ಯಾವ ಅಂಶ ನಿಮಗೆ ಸಹಾಯ ಮಾಡಿತ್ತು ಎಂದು ಕೇಳಿದೆ. ಇದಕ್ಕೆ ಉತ್ತರಿಸಿದ ಅವರು, ಐಪಿಎಲ್ನಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸುತ್ತಾರೋ ಅಂತಹವರ ಬಗ್ಗೆ ಮಾಲೀಕರು ಹೆಚ್ಚು ಯೋಚನೆ ಮಾಡುತ್ತಾರೆ.
ಭಾರತದಲ್ಲಿ, ಎಲ್ಲಾ ಮೈದಾನಗಳು ತುಲನಾತ್ಮಕವಾಗಿ ಚಿಕ್ಕದಾಗಿದೆ ಎಂದು ನನಗೆ ಅನಿಸುತ್ತದೆ. ಆಶಾದಾಯಕವಾಗಿ, ಅದು ಹಾಗೆಯೇ ಇರುತ್ತದೆ, ಸಿಕ್ಸರ್‌ಗಳನ್ನು ಹೊಡೆಯುವುದು ಸ್ವಲ್ಪ ಸುಲಭವಾಗುತ್ತದೆ ಎಂದು ಎಸ್ಆರ್ಎಚ್ ಆಟಗಾರ ಹೆನ್ರಿಚ್ ಕ್ಲಾಸೆನ್ ಹೇಳಿದ್ದಾರೆ. ಇತ್ತ ಎಸ್ಆರ್ಎಚ್ ಆಟಗಾರನ ಹೇಳಿಕೆ ಸಖತ್ ವೈರಲ್ ಆಗಿದ್ದು, ಆರ್ಸಿಬಿ ನಾಯಕನಿಂದ ಪಡೆದ ಸಲಹೆಯೇ ಇವರ ಸ್ಪೋಟಕ ಬ್ಯಾಟಿಂಗ್ಗೆ ಸ್ಪೂರ್ತಿ ಎಂದು ಹೇಳಲಾಗಿದೆ.