ಧೋನಿ ಅಭಿಮಾನಿಗಳ ವಿರುದ್ಧ ಸಿಡಿದೆದ್ದ ಅಂಬಟಿ ರಾಯುಡು! IPL

ambati
Published on

IPL | ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಧೋನಿ ಅಭಿಮಾನಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಚೆನ್ನೈನಲ್ಲಿ ಪಂದ್ಯ ನಡೆಯುವ ಸಮಯದಲ್ಲಿ ಅವರ ಅಭಿಮಾನಿಗಳು ಧೋನಿ, ಧೋನಿ ಎಂಬ ಘೋಷಣೆಗಳನ್ನ ಕೂಗುತ್ತಾರೆ. ಅವರಿಗೆ ಧೋನಿ ಅವರ ಮೇಲೆ ಅಭಿಮಾನ ಇರೋದು ಒಳ್ಳೆಯದೇ, ಆದರೆ ಅತೀಯಾಗಿ ಧೋನಿ ಪರ ಕೂಗುವುದರಿಂದ ಮೈದಾನದಲ್ಲಿ ಆಟವಾಡಲು ಇತರ ಆಟಗಾರರಿಗೆ ತುಂಬಾ ಕಷ್ಟವಾಗುತ್ತದೆ ಎಂದಿದ್ದಾರೆ.

ತಂಡ ಬಿಟ್ಟು ಧೋನಿಗೆ ಆದ್ಯತೆ ನೀಡುವ CSK ಅಭಿಮಾನಿಗಳು

ಇನ್ನೂ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಧೋನಿಯ ಬಗ್ಗೆ ಪ್ರೇಕ್ಷಕರು ಕೂಗುವ ಬಗ್ಗೆ ರಾಯುಡು ಪ್ರಶ್ನಿಸಿದ್ದಾರೆ. ಚೆನ್ನೈ ಪ್ರೇಕ್ಷಕರು ಯಾವಾಗಲೂ ಉತ್ತಮ ಕ್ರಿಕೆಟ್​ಅನ್ನು ಗೌರವಿಸುತ್ತಾರೆ ಮತ್ತು ಕ್ರೀಡೆಯ ಬಗ್ಗೆ ನಿಜವಾಗಿಯೂ ಜ್ಞಾನವುಳ್ಳವರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ. ಆದರೆ ನೀವು ಸಿಎಸ್‌ಕೆ ಅಭಿಮಾನಿಗಳಾಗುವ ಮೊದಲು ಎಂಎಸ್ ಧೋನಿ ಅಭಿಮಾನಿಗಳು ಎಂದು ಭಾವಿಸುತ್ತೀರಿ, ನೀವು ಧೋನಿ ಬಗ್ಗೆ ಇಟ್ಟಿರುವ ಪ್ರೀತಿಯನ್ನು ನಾನು ಪ್ರಶಂಸಿಸುತ್ತೇನೆ, ಏಕೆಂದರೆ ಅವರು ಹಲವು ವರ್ಷಗಳಿಂದ ತಂಡವನ್ನು ಕಟ್ಟುವ ಮೂಲಕ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರು ಸಿಎಸ್​ಕೆಗಾಗಿ ಶ್ರಮಿಸಿದ್ದನ್ನ ಅಭಿಮಾನಿಗಳು ಸಂತಸದಿಂದ ಸಂಭ್ರಮಿಸುವುದು ಸರಿಯಾಗಿದೆ. ಆದರೆ ಅತೀ ಹೆಚ್ಚು ಅಭಿಮಾನ ತಂಡದ ಇತರ ಸದಸ್ಯರ ಆಟದ ಮೇಲೆ ಪರಿಣಾಮ ಬೀರಲಿದೆ ಎಂದು ರಾಯುಡು ಹೇಳಿದ್ದಾರೆ.

MS Dhoni

ಪ್ರತಿಯೊಬ್ಬ ಆಟಗಾರನಿಗೆ ಬೆಂಬಲಬೇಕು

ನಾವು ಸಹ ಎಂಎಸ್ ಧೋನಿಯನ್ನ ಸಹ ಪ್ರೀತಿಸುತ್ತೇವೆ. ಅವರು ಬ್ಯಾಟಿಂಗ್ ಮಾಡುವುದನ್ನು ನೋಡಲು ಬಯಸುತ್ತೇವೆ. ಆದರೆ ಕೆಲವೊಮ್ಮೆ ಒಬ್ಬ ವ್ಯಕ್ತಿ ಬ್ಯಾಟಿಂಗ್ ಮಾಡಲು ಹೊರಟಾಗ ಅವರು ಔಟ್​ ಆಗುವಂತೆ ಕೂಗುತ್ತಾರೆ. ಇದು ತಂಡದ ಗೆಲುವಿಗೆ ಸಹಕಾರಿಯಾಗುವುದಿಲ್ಲ, ಇತರೆ ಆಟಗಾರರು ತಂಡಕ್ಕಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಫ್ರಾಂಚೈಸಿಗಾಗಿ ತಯಾರಿ ನಡೆಸುತ್ತಿದ್ದಾರೆ, ಅವರು ಸಿಎಸ್​ಕೆ ತಂಡಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಅದೆಲ್ಲವನ್ನೂ ಕೂಡ ನೆನಪಿನಲ್ಲಿಟ್ಟುಕೊಂಡು ಇಡೀ ತಂಡದ ಆಟಗಾರರನ್ನು ಮುನ್ನಡೆಸಬೇಕು ಎಂದು ರಾಯುಡು ಹೇಳಿದ್ದಾರೆ.

ಇತರ ಆಟಗಾರರ ಮೇಲೆ ಆಗುವ ಪರಿಣಾಮವೇನು?

ಇದು ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಮಸ್ಯೆಯಾಗಿದ್ದು, ಅನೇಕ ಆಟಗಾರರು ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿದ್ದರೂ ಸಹ ಇದನ್ನು ಅನುಭವಿಸುತ್ತಿದ್ದಾರೆ ಎಂದು ಅಂಬಟಿ ರಾಯುಡು ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಸೇರಿದಂತೆ ತಂಡದ ಪ್ರತಿಯೊಬ್ಬರೂ ಎಂಎಸ್ ಧೋನಿಯನ್ನು ಆಳವಾಗಿ ಗೌರವಿಸುತ್ತೇವೆ. ಆದರೆ ಪ್ರೇಕ್ಷಕರು ಅವರ ಮೇಲೆ ತೀವ್ರ ಗಮನ ಹರಿಸುವುದು ಕೆಲವೊಮ್ಮೆ ಇತರ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಸಿಎಸ್‌ಕೆ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡಲು ಹೊರಟಾಗ, ಅವರಿಗಾಗಿ ಹುರಿದುಂಬಿಸುವ ಬದಲು ಧೋನಿ ಬ್ಯಾಟ್​ ಹಿಡಿದು ಆಡುವುದನ್ನು ನೋಡಲು ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಔಟ್ ಆಗಬೇಕೆಂದು ಪ್ರೇಕ್ಷಕರು ಕೆಲವೊಮ್ಮೆ ಬಯಸುತ್ತಾರೆ. ಇತರ ಆಟಗಾರರ ನೈತಿಕತೆ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂದು ರಾಯುಡು ಬೇಸರ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net