IPL: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ದೊಡ್ಡ ಬದಲಾವಣೆ; ಆಡಳಿತ ವೈಖರಿ ಬದಲು!

web dc
Published on

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮುಂಬರುವ ಐಪಿಎಲ್​ಗೆ ಪೂರ್ವಭಾವಿಯಾಗಿ ಮಾಜಿ ಕ್ರಿಕೆಟಿಗರಾದ ವೇಣುಗೋಪಾಲ್​ ರಾವ್​ ಮತ್ತು ಹೇಮಂಗ್​ ಬದಾನಿ ಅವರನ್ನು ಕ್ರಮವಾಗಿ ಕ್ರಿಕೆಟ್​ ನಿರ್ದೇಶಕ ಮತ್ತು ಮುಖ್ಯ ಕೋಚ್​ ಆಗಿ ನೇಮಿಸಿದೆ. ಆಂಧ್ರದ ವೇಣುಗೋಪಾಲ್​ ಭಾರತ ಪರ 16 ಎಕದಿನ ಪಂದ್ಯ ಆಡಿದ್ದಾರೆ. ಅಲ್ಲದೆ 2009ರಲ್ಲಿ ಐಪಿಎಲ್​ ಗೆದ್ದ ಡೆಕ್ಕನ್​ ಚಾರ್ಜರ್ಸ್​ ತಂಡದ ಪ್ರಮುಖ ಸದಸ್ಯರಾಗಿದ್ದರು.

ಈ ನಡುವೆ ಡೆಲ್ಲಿ ತಂಡದ ಆಡಳಿತ ಮಂಡಳಿಯಲ್ಲಿ ಬದಲಾವಣೆಯಾಗಿದ್ದು, ಜೆಎಸ್​ಡಬ್ಲು ಸ್ಪೋರ್ಟ್ಸ್​ ಮತ್ತು ಜಿಎಂಆರ್​ ಗ್ರೂಪ್​ ಕಂಪನಿಗಳು ಆವರ್ತನ ಪದ್ಧತಿಯನ್ವಯ ತಂಡಗಳ ಉಸ್ತುವಾರಿ ನೋಡಿಕೊಳ್ಳಲಿವೆ. ಇದರನ್ವಯ ಮುಂದಿನ 2 ವರ್ಷ ಜಿಎಂಆರ್​ ಗ್ರೂಪ್​, ಐಪಿಎಲ್​ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮ್ಯಾನೇಜ್​ಮೆಂಟ್​ ನಿರ್ವಹಿಸಲಿದೆ. ಮುಂದಿನ 2 ವರ್ಷ ಜೆಎಸ್​ಡಬ್ಲ್ಯುಗೆ ವುಮೆನ್ಸ್​ ಪ್ರೀಮಿಯರ್​ ಲೀಗ್​ನ ಡೆಲ್ಲಿ ತಂಡ ಮತ್ತು ದ. ಆಫ್ರಿಕಾದ ಎಸ್​ಎ20ಯಲ್ಲಿ ಆಡುವ ಪ್ರಿಟೋರಿಯಾ ಕ್ಯಾಪಿಟಲ್ಸ್​ ಆಡಳಿತ ನಿರ್ವಹಿಸಲಿದೆ.

ಇದರನ್ವಯ ಸೌರವ್​ ಗಂಗೂಲಿ ಇನ್ನು ಜೆಎಸ್​ಡಬ್ಲು ಸ್ಪೋರ್ಟ್ಸ್​ನಲ್ಲಿ ಕ್ರಿಕೆಟ್​ ನಿರ್ದೇಶಕರಾಗಿ ಡೆಲ್ಲಿ ಮಹಿಳಾ ತಂಡ ಮತ್ತು ಪ್ರಿಟೋರಿಯಾ ತಂಡವನ್ನಷ್ಟೇ ನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net