ಡಿ.19ರಂದು ಅರಬ್​ ನಾಡಿನಲ್ಲಿ ಐಪಿಎಲ್​ ಕ್ರಿಕೆಟಿಗರ ಹರಾಜು; ರಿಟೇನ್​ ಗಡುವು ವಿಸ್ತರಣೆ, ಬಜೆಟ್​ ಏರಿಕೆ!

ipl web
Published on

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್​ 19ರಂದು ದುಬೈನ ಕೋಕ-ಕೋಲ ಅರೆನಾದಲ್ಲಿ ನಡೆಯಲಿದೆ. ಇದರೊಂದಿಗೆ ಐಪಿಎಲ್​ ಹರಾಜು ಪ್ರಕ್ರಿಯೆ ಮೊಟ್ಟಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಡೆಯುವುದು ಖಚಿತಗೊಂಡಂತಾಗಿದೆ.

ಅದಕ್ಕೆ ಮುನ್ನ ಆಟಗಾರರ ರಿಟೇನ್​ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ನವೆಂಬರ್​ 26ರವರೆಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್​ 15ರವರೆಗೆ ಇದ್ದ ಗಡುವನ್ನು ಇದೀಗ ವಿಸ್ತರಿಸಲಾಗಿದೆ. ಈ ಬಾರಿ 10 ತಂಡಗಳಿಗೆ ಆಟಗಾರರ ಖರೀದಿಗೆ ಬಜೆಟ್​ ಮಿತಿ 100 ಕೋಟಿ ರೂ.ಗೆ ಏರಿಕೆಯಾಗಲಿದೆ.

ಶೆಫರ್ಡ್​ ಮುಂಬೈಗೆ ವರ್ಗಾವಣೆ: ರಿಟೇನ್​ಗೆ ಮುನ್ನ ಆಟಗಾರರ ವರ್ಗಾವಣೆಗೂ ತಂಡಗಳಿಗೆ ಬಿಸಿಸಿಐ ಅವಕಾಶ ಕಲ್ಪಿಸಿದೆ. ಇದರನ್ವಯ ಲಖನೌ ಸೂಪರ್​ ಜೈಂಟ್ಸ್​ ತಂಡದಲ್ಲಿದ್ದ ವೆಸ್ಟ್​ ಇಂಡೀಸ್​ನ ರೊಮಾರಿಯೊ ಶೆಫರ್ಡ್​, ಮುಂಬೈ ಇಂಡಿಯನ್ಸ್​ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಅವರು ಲಖನೌದಂತೆ ಮುಂಬೈನಲ್ಲೂ ಮೂಲಬೆಲೆ 50 ಲಕ್ಷ ರೂ.ಗಳ ವೇತನ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net