

ನವದೆಹಲಿ: ಮುಂದಿನ ವರ್ಷದ ಐಪಿಎಲ್ 20ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ನಡೆಯಲಿರುವ ದಿನದಂದೇ ಹರಾಜು ಪ್ರಕ್ರಿಯೆ ನಿಗದಿಯಾಗಿರುವುದು ಅಚ್ಚರಿ ಎನಿಸಿದೆ.
2022ರ ಬಳಿಕ ಭಾರತದಲ್ಲಿ ನಡೆಯಲಿರುವ ಮೊದಲ ಐಪಿಎಲ್ ಹರಾಜು ಪ್ರಕ್ರಿಯೆ ಇದಾಗಿದೆ. ಕಳೆದ 3 ಹರಾಜು ಪ್ರಕ್ರಿಯೆಗಳು ದುಬೈ, ಜಿದ್ದಾ ಮತ್ತು ಅಬುಧಾಬಿಯಲ್ಲಿ ನಡೆದಿದ್ದವು. ಹರಾಜಿಗೆ ಮುನ್ನ ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 15 ಅಂತಿಮ ಗಡುವಾಗಿದೆ.
ಐಪಿಎಲ್ 20ನೇ ಆವೃತ್ತಿ 2027ರ ಮಾರ್ಚ್ 14ರಿಂದ ಮೇ 30ರ ನಡುವೆ ನಡೆಯುವ ನಿರೀಕ್ಷೆ ಇದೆ. ಆರ್ಸಿಬಿ ತಂಡ ಈ ಬಾರಿ ಮತ್ತೆ ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯಲಿದ್ದು, ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಕನಸಿನಲ್ಲಿದೆ.