ಐಪಿಎಲ್ ಜತೆ ಸಿಪಿಎಲ್ ಸಂಘರ್ಷ?

page 10 3
Published on

ನವದೆಹಲಿ: ಐಪಿಎಲ್ ಟೂರ್ನಿ ನಿಗದಿಯಂತೆ ಏಪ್ರಿಲ್-ಮೇ ಸಮಯದಲ್ಲಿ ನಡೆಯದೆ ಅನಿರ್ದಿ ಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಕಾರಣದಿಂದ ವೆಸ್ಟ್ ಇಂಡೀಸ್​ನ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ಸಂಘಟಕರಿಗೆ ‘ದಿನಾಂಕ ಸಂಘರ್ಷ’ ಏರ್ಪಡುವ ಭೀತಿ ಶುರುವಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಸಿಪಿಎಲ್ ಆಗಸ್ಟ್ 19ರಿಂದ ಸೆಪ್ಟೆಂಬರ್ 26ರವರೆಗೆ ನಡೆಯಬೇಕಿದೆ. ಆದರೆ ಐಪಿಎಲ್ ಕೂಡ ಸೆಪ್ಟೆಂಬರ್​ಗೆ ಮುಂದೂಡಿಕೆಯಾಗುವ ಸಾಧ್ಯತೆ ಇರುವುದರಿಂದ ಸಿಪಿಎಲ್ ಸಿಇಒ ಪೆಟ್ ರಸೆಲ್ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಜತೆಯಲ್ಲೇ, ಬಿಸಿಸಿಐ ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯದೆ ತನ್ನದೇ ಆದ ಅವಧಿಯನ್ನು ಕಂಡುಕೊಳ್ಳಬಹುದು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

‘ಬಿಸಿಸಿಐ ಇತರ ಲೀಗ್​ಗಳನ್ನು ಗಣನೆಗೆ ತೆಗೆದುಕೊಂಡು ಕ್ರಮಕೈಗೊಳ್ಳಲಿ. ಐಪಿಎಲ್ ಜತೆಗೆ ನಮಗೆ ಪೈಪೋಟಿ ಸಾಧ್ಯವಿಲ್ಲ. ಬಹುತೇಕ ವಿಂಡೀಸ್ ಆಟಗಾರರು ಐಪಿಎಲ್​ನಲ್ಲಿ ಆಡಲು ಬಯಸುತ್ತಾರೆ. ಆಗ ಸಿಪಿಎಲ್​ಗೆ

ಗೈರಾಗುತ್ತಾರೆ. ಇದರಿಂದ ನಮಗೆ ನಷ್ಟ’ ಎಂದು ರಸೆಲ್ ತಿಳಿಸಿದ್ದಾರೆ. ಕರೊನಾ ಭೀತಿ ಇಡೀ ವಿಶ್ವವನ್ನೇ ವ್ಯಾಪಿಸಿದ್ದರೂ ಕೆರಿಬಿಯನ್ ದ್ವೀಪರಾಷ್ಟ್ರಗಳನ್ನು ಅಷ್ಟಾಗಿ ಕಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net