ಐಪಿಎಲ್​ ಹರಾಜು ಪ್ರಕ್ರಿಯೆಗೆ ದಿನಾಂಕ ಫಿಕ್ಸ್! ಯಾವ ದೇಶದಲ್ಲಿ ನಡೆಯಲಿದೆ? ಹೀಗಿದೆ ವರದಿ | IPL 2026 Auction

Untitled design (61)
Published on

IPL 2026 Auction: 17 ವರ್ಷಗಳಿಂದ ಒಂದು ಬಾರಿಯೂ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 18ನೇ ಆವೃತ್ತಿಯಲ್ಲಿ ರೋಚಕ ಜಯದ ಮೂಲಕ ಕಪ್​ ಗೆದ್ದಿದ್ದು ಇದೀಗ ಐಪಿಎಲ್​ನಲ್ಲಿ ಇತಿಹಾಸ. ಈಗ ಮತ್ತೊಂದು ಆವೃತ್ತಿ, ಮತ್ತೊಂದು ತಂಡ ಟ್ರೋಫಿ ಎತ್ತಿಹಿಡಿಯುವ ಸಮಯ ಸನ್ನಿಹಿತವಾಗಿದೆ. ಇದಕ್ಕೂ ಮುನ್ನ ನಡೆಯುವ ಐಪಿಎಲ್​ ಹರಾಜು ಪ್ರಕ್ರಿಯೆ ಮೇಲೆ ಸದ್ಯ ಕ್ರಿಕೆಟ್​ ಪ್ರಿಯರ ಚಿತ್ತ ಮೂಡಿದೆ.

19ನೇ ಆವೃತ್ತಿಯಲ್ಲಿ ಯಾವ ಆಟಗಾರರನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಬೇಕು? ಯಾರಿಗೆಲ್ಲ ಗೇಟ್​ಪಾಸ್​ ಕೊಡಬೇಕು ಹಾಗೂ ಯಾವ ವಿಭಾಗಕ್ಕೆ ಯಾರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬುದನ್ನು ಆಯಾ ಫ್ರಾಂಚೈಸಿಗಳು ನಿರ್ಧರಿಸುವುದೇ ವರ್ಷದ ಕೊನೆಯ ಎರಡು ತಿಂಗಳಲ್ಲಿ. 10 ಐಪಿಎಲ್​ ಫ್ರಾಂಚೈಸಿಗಳ ಮಾಲೀಕರು ಹಾಗೂ ತಂಡದ ಇತರೆ ಸದಸ್ಯರು, ಒಂದಷ್ಟು ಕ್ರಿಕೆಟಿಗರಿಗೆ ಗುಡ್​ಬೈ ಹೇಳಿ, ನಂತರ ನಡೆಯುವ ಹರಾಜಿನಲ್ಲಿ ಎಷ್ಟು ಜನ ಪ್ರತಿಭಾವಂತ ಹಾಗೂ ಯುವ ಆಟಗಾರರಿಗೆ ಸ್ಥಾನ ಕೊಡಬೇಕು ಎಂಬುದನ್ನು ಚರ್ಚಿಸಿ, ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳುವ ವೇದಿಕೆಗೆ ಇದೀಗ ದಿನಾಂಕ ಫಿಕ್ಸ್ ಆಗಿದೆ ಎಂದು ಹೇಳಲಾಗಿದೆ.

ಈ ವರ್ಷ ಭಾರತದಲ್ಲಿ 2026ರ ಐಪಿಎಲ್​ ಹರಾಜು ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್​ 15ರಿಂದ ಆರಂಭಗೊಳ್ಳಲಿದೆ ಎಂದು ವರದಿಗಳು ಸೂಚಿಸಿವೆ. ಆದರೆ, ಈ ಕುರಿತಂತೆ ಅಧಿಕೃತ ಮಾಹಿತಿ ಇನ್ನೂ ಘೋಷಣೆ ಆಗಬೇಕಿದೆ. ಹರಾಜಿಗೂ ಮೊದಲು 10 ಐಪಿಎಲ್ ತಂಡಗಳು ತಮ್ಮ ಉಳಿಸಿಕೊಂಡ ಮತ್ತು ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕು. ಇದಕ್ಕೂ ಮೊದಲು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಮೆಗಾ ಹರಾಜು ಇದೇ ನವೆಂಬರ್ 27ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net