

IPL 2025: ಮಾ.22ರಿಂದ ಶುರುವಾದ ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಕುತೂಹಲವನ್ನು ಮತ್ತಷ್ಟು ದುಪ್ಪಟ್ಟಾಗಿಸಿದೆ. ಈಗಾಗಲೇ ಮೊದಲಾರ್ಧ ಮುಗಿದಿದ್ದು, ಒಂದಕ್ಕಿಂತ ಒಂದು ಪಂದ್ಯ ರೋಚಕತೆಯತ್ತ ಸಾಗುತ್ತಿದೆ. ಪ್ರತಿಯೊಂದು ಮ್ಯಾಚ್ ಕೂಡ ಕೌತುಕ ಹುಟ್ಟುಹಾಕುತ್ತಿದೆ. ಪ್ರಸ್ತುತ 10 ಬಲಿಷ್ಠ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ತಂಡಗಳು ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುವುದರ ಜತೆಗೆ ಅಂಕಪಟ್ಟಿಯ ಟಾಪ್ ನಾಲ್ಕು ಸ್ಥಾನಗಳಿಗೆ ಭಾರೀ ಪೈಪೋಟಿ ನೀಡುತ್ತಿವೆ.
1. ಗುಜರಾತ್ ಟೈಟನ್ಸ್ (8 ಪಂದ್ಯ, 6 ಗೆಲುವು, 2 ಸೋಲು)
2. ಡೆಲ್ಲಿ ಕ್ಯಾಪಿಟಲ್ಸ್ (8 ಪಂದ್ಯ, 6 ಗೆಲುವು, 2 ಸೋಲು)
3. ಮುಂಬೈ ಇಂಡಿಯನ್ಸ್ (9 ಪಂದ್ಯ, 5 ಗೆಲುವು, 4 ಸೋಲು)
4. ರಾಯಲ್ ಚಾಲೆಂಜರ್ಸ್ ಬೆಂಗಳೂರು (8 ಪಂದ್ಯ, 5 ಗೆಲುವು, 3 ಸೋಲು)
1. ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್) ( 417 ರನ್, 8 ಪಂದ್ಯ)
2. ಪ್ರಸಿದ್ಧ ಕೃಷ್ಣ (ಗುಜರಾತ್ ಟೈಟನ್ಸ್) ( 16 ವಿಕೆಟ್, 8 ಪಂದ್ಯ)