ರೋಹಿತ್, ಸೂರ್ಯ ಮತ್ತು ತಿಲಕ್ ಸೇರಿ ಈಜುಕೊಳಕ್ಕೆ ತಳ್ಳಿದ್ದು ಯಾರನ್ನ ಗೊತ್ತಾ? Mumbai

swimming
Published on

Mumbai | ಇದೇ ಮಾರ್ಚ್ (29) ಶನಿವಾರ, ನಡೆಯಲಿರುವ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇನ್ನೂ ಪಂದ್ಯ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ, ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮೂವರೂ ಸೇರಿ ಒಬ್ಬ ವ್ಯಕ್ತಿಯನ್ನು ಎತ್ತಿಕೊಂಡು ಈಜುಕೊಳಕ್ಕೆ ತಳ್ಳುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

ಈಜುಕೊಳಕ್ಕೆ ಬಿದ್ದ ವ್ಯಕ್ತಿ ಯಾರು?

ರಾತ್ರಿ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಒಬ್ಬ ವ್ಯಕ್ತಿಯನ್ನು ಮೇಲೆ ಎತ್ತಿದ್ದಾರೆ. ಈ ಸಮಯದಲ್ಲಿ, ಸೂರ್ಯಕುಮಾರ್ ಯಾದವ್ ಹಿಂದಿನಿಂದ ಬಂದು ಬೆಂಬಲ ನೀಡುತ್ತಾರೆ. ನಂತರ ಮುಂದೆ ಸಾಗಿ ಮುಂಬೈ ಇಂಡಿಯನ್ಸ್‌ನ ಮೂವರು ಆಟಗಾರರು ಆ ವ್ಯಕ್ತಿಯನ್ನು ಈಜುಕೊಳಕ್ಕೆ ಎಸೆದಿದ್ದಾರೆ.

ಮೂವರು ಆಟಗಾರರು ಒಟ್ಟಾಗಿ ಯಾರನ್ನು ಈಜುಕೊಳಕ್ಕೆ ತಳ್ಳಿದರು ಎಂಬುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ. ಇನ್ನೂ ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ತಿಳಿದು ಬಂದಿಲ್ಲ. ಆದರೆ ಆ ವ್ಯಕ್ತಿಯನ್ನು ಮುಂಬೈ ಇಂಡಿಯನ್ಸ್ ತಂಡದ ನಿರ್ವಾಹಕ ಎನ್ನಲಾಗಿದ್ದು, ಈ ವಿಡಿಯೋವನ್ನು ನೋಡಿದಾಗ ಇವರು ಕೇವಲ ಹಾಸ್ಯಕ್ಕಾಗಿ ಹೀಗೆ ಮಾಡಿದ್ದಾರೆ ಎಂಬುದು ಕಂಡುಬರುತ್ತದೆ.

ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈ

ಇದೇ ಮಾರ್ಚ್ (29) ಶನಿವಾರ, ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡದ ಜೊತೆ ಕಣಕ್ಕಿಳಿಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಜೆ 7:30 ರಿಂದ ಪಂದ್ಯ ಆರಂಭಗೊಳ್ಳಲಿದೆ. ಮುಂಬೈ ಇಂಡಿಯನ್ಸ್​ ಹಾಗೂ ಗುಜರಾತ್ ಟೈಟಾನ್ಸ್ ಎರಡೂ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿವೆ. ಇದು ಎರಡೂ ತಂಡಗಳ ನಡುವಿನ ಎರಡನೇ ಪಂದ್ಯವಾಗಿದೆ.

ಮತ್ತೆ ನಾಯಕನಾದ ಹಾರ್ದಿಕ್ ಪಾಂಡ್ಯ

ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಫಲವಾಯಿತು. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದರು. ಪಾಂಡ್ಯ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿತ್ತು. ಸದ್ಯ ಆ ಪಂದ್ಯ ಈಗ ಮುಗಿದಿದ್ದು, ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಹಾರ್ದಿಕ್​ ಮತ್ತೆ ನಾಯಕನಾಗಿ ಕಾಲಿಡುತ್ತಿದ್ದು, ಗುಜರಾತ್​ ಟೈಟಾನ್ಸ್ ವಿರುದ್ಧ ಮುಂಬೈ ತಂಡ ಕಾದಾಟ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net