ಮಳೆಯ ಭೀತಿಯಲ್ಲಿಯೇ IPL 2025 ಮೊದಲ ಪಂದ್ಯ ಆರಂಭ; ಟಾಸ್​ ಗೆದ್ದ RCB ಫಿಲ್ಡಿಂಗ್​ ಆಯ್ಕೆ

dk - 2025-03-22T192337.647
Published on

IPL 2025: ಇಂದು ಐಪಿಎಲ್ 18ನೇ ಆವೃತ್ತಿಗೆ ಕಲ್ಕತ್ತಾದಲ್ಲಿ ಅದ್ದೂರಿ ಚಾಲನೆ ಸಿಕ್ಕಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಟಾಸ್​ ಗೆದ್ದು ಫಿಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ.

ಮೊದಲ ಹಾಗೂ ಶುಭಾರಂಭ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಲಿವೆ.

ಐಪಿಎಲ್ ಖದರ್ ಶುರುವಿನ ಬೆನ್ನಲ್ಲೇ ಕೆಕೆಆರ್-ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ ಎದುರಾಗಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳ ಆತಂಕ, ಗೊಂದಲಕ್ಕೆ ಕಾರಣವಾಗಿದೆ.

ಐಪಿಎಲ್ 2025ರ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್‌ನ ಬಾದಷ, ಶಾರುಖ್​ ಖಾನ್​, ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್, ರ್ಯಾಪರ್ ಕರಣ್ ಔಜ್ಞಾ ಮತ್ತು ಬಾಲಿವುಡ್ ತಾರೆ ದಿಶಾ ಪಟಾನಿ ಭಾಗವಹಿ ಐಪಿಎಲ್ ವೇದಿಕೆಯ ಮೆರುಗು ಹೆಚ್ಚಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net