

ನವದೆಹಲಿ: ನವೆಂಬರ್ 24 ಹಾಗೂ 25ರಂದು ನಡೆಯಲಿರುವ ಐಪಿಎಲ್ ಹರಾಜಿನತ್ತ ಎಲ್ಲರ ಚಿತ್ತ ಮೂಡಿದ್ದು, ಯಾವ ಸ್ಟಾರ್ ಆಟಗಾರರನ್ನು ಆಯಾ ಫ್ರಾಂಚೈಸಿ ಖರೀದಿ ಮಾಡಲಿದೆ? ಎಷ್ಟು ಕೋಟಿ ಹಣಕ್ಕಾಗಿ ಬಿಡ್ ಮಾಡಲಿದೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗಿತ್ತು. ಆದರೆ, ಮೊದಲ ದಿನದ ಹರಾಜು ಪ್ರಕ್ರಿಯೆ ಬಹುತೇಕರನ್ನು ಅಚ್ಚರಿಗೆ ದೂಡಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಟಾರ್ಗೆಟ್ ಮಾಡಬೇಕಿದ್ದ ಆಟಗಾರರನ್ನು ಖರೀದಿ ( IPL 2025 Auction) ಮಾಡುವಲ್ಲಿ ಆಯಾ ತಂಡಗಳು ವಿಫಲವಾಗಿರುವುದು ಇದೀಗ ಕ್ರಿಕೆಟ್ ಪ್ರಿಯರಲ್ಲಿ ಭಾರೀ ನಿರಾಸೆ ಮೂಡಿಸಿದೆ.