ನಾವು ಈ ವೇಳೆಗಾಗಲೇ ಪ್ಲೇಆಫ್​ ಪ್ರವೇಶಿಸಿರಬೇಕಿತ್ತು ಆದರೆ...; ಆರ್​ಆರ್​ ಆಟಗಾರ ಹೀಗಂದಿದ್ಯಾಕೆ

Donovan Ferreira
Published on

ಚೆನ್ನೈ: ಹಾಲಿ ಐಪಿಎಲ್​ ಆವೃತ್ತಿಯಲ್ಲ ಉತ್ತಮ ಪ್ರದರ್ನಶದ ಮೂಲಕ ಪ್ಲೇಆಫ್​ ಟಿಕೆಟ್​ಅನ್ನು ಬಹುತೇಕ ಖಚಿತಪಡಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್​ ಮೇ 12ರಂದು ನಡೆಯುವ 61ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಸವಾಲನ್ನು ಎದುರಿಸಲಿದೆ. ಇನ್ನೂ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಗೆದ್ದರೆ ಪ್ಲೇಆಫ್​ ಪ್ರವೇಶಿಸಿದ ಎರಡನೇ ತಂಡವಾಗುತ್ತದೆ.

ಇನ್ನೂ ಈ ಕುರಿತು ಮಾತನಾಡಿರುವ ರಾಜಸ್ಥಾನ ರಾಯಲ್ಸ್​ ಆಲ್ರೌಂಡರ್​ ಡೊನೊವನ್ ಫೆರೇರಾ, ಲೆಕ್ಕಾಚಾರದ ಪ್ರಕಾರ ತಂಡ ಇಷ್ಟೊತ್ತಿಗಾಗಲೇ ಪ್ಲೇಆಫ್​​ಗೆ ಪ್ರವೇಶ ಪಡೆಯಬೇಕಿತ್ತು. ಆದರೆ, ಬಾಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ನಮಗೆ ಉತ್ತಮ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗೆ ನೋಡಿದರೆ ನಾವು ಈ ವೇಳೆಗಾಗಲೇ ಐಪಿಎಲ್​ ಪ್ಲೇಆಫ್​ ಪ್ರವೇಶಿಸಿರಬೇಕಿತ್ತು. ಆದರೆ, ಐಪಿಎಲ್​ ಒಂದು ದೊಡ್ಡ ಟೂರ್ನಿ ಆಗಿರುವುದರಿಂದ ದ್ವಿತಿಯಾರ್ಧ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲಾರ್ಧದಲ್ಲಿ ನಾವು ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್​ ಹಾದಿಯನ್ನು ಸುಗಮವಾಗಿಸಿಕೊಂಡೆವು. ಆದರೆ, ದ್ವಿತಿಯಾರ್ಧದಲ್ಲಿನ ಕೆಲವು ಸೋಲುಗಳು ನಮ್ಮ ಪ್ಲೇಆಫ್​ ಪ್ರವೇಶಿಸುವುನ್ನು ಸ್ವಲ್ಪ ತಡ ಮಾಡಿತ್ತು. ಸಿಎಸ್​ಕೆ ವಿರುದ್ಧದ ಪಂದ್ಯ ನಮಗೆ ಬಹಳ ಮುಖ್ಯವಾಗಿದ್ದು, ನಮ್ಮ ಗುರಿ ಇರುವುದು ಗೆಲುವಿನ ಕಡೆ ಎಂದಿದ್ದಾರೆ.

ನಾವು ಈ ಪಂದ್ಯವನ್ನು ಗೆದ್ದರೆ ಎರಡನೇ ತಂಡವಾಗಿ ಪ್ಲೇಆಫ್​ ಪ್ರವೇಶಿಸುತ್ತೇವೆ. ಇದಾದ ಬಳಿಕ ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು, ರಿಸ್ಕ್​​ ತೆಗೆದುಕೊಳ್ಳಲು ನಾವು ತಯಾರಿಲ್ಲ. ಹೀಗಾಗಿ ನಾವು ಚೆನ್ನಯ ವಿರುದ್ಧದ ಪಂದ್ಯದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ರಾಜಸ್ಥಾನ ರಾಯಲ್ಸ್​ ತಂಡದ ಆಲ್ರೌಂಡರ್​ ಡೊನೊವನ್ ಫೆರೇರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net